fbpx
ಸಮಾಚಾರ

ಡಿಸೆಂಬರ್ 11: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಬುಧವಾರ, ಡಿಸೆಂಬರ್ 11 2019
ಸೂರ್ಯೋದಯ : 6:31 am
ಸೂರ್ಯಾಸ್ತ: 5:54 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಶುಕ್ಲಪಕ್ಷ
ತಿಥಿ : ಚತುರ್ದಶಿ
ನಕ್ಷತ್ರ: ರೋಹಿಣಿ 30:22
ಯೋಗ: ಸಿಧ್ಧ 15:21
ಕರಣ: ವಾಣಿಜ 10:59 ವಿಷ್ಟಿ 22:54

ಅಭಿಜಿತ್ ಮುಹುರ್ತ:ಯಾವುದೂ ಇಲ್ಲ
ಅಮೃತಕಾಲ : 3:07 am – 4:45 am

ರಾಹುಕಾಲ- 12:12 pm – 1:37 pm
ಯಮಗಂಡ ಕಾಲ- 7:59 am – 9:23 am
ಗುಳಿಕ ಕಾಲ- 10:48 am – 12:12 pm

 

ಹಿರಿಯರು ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ದೈವದ ಅವಕೃಪೆಯು ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ಈ ಸಂದರ್ಭದಲ್ಲಿ ಹಿರಿಯರೊಡನೆ ಕೋಪತಾಪ ಪ್ರದರ್ಶಿಸುವುದು ಒಳ್ಳೆಯದಲ್ಲ. ತಾಳ್ಮೆಯಿಂದ ಇರಿ.

ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ. ಇದುವರೆಗೂ ನಿಮ್ಮ ಸುತ್ತಲಿದ್ದ ಜನರು ಕ್ರಮೇಣ ಕಡಿಮೆ ಆಗುತ್ತಿರುವರು. ಕಾರಣ ನಿಮ್ಮ ಆರ್ಥಿಕ ಸ್ಥಿತಿ ದಿನೇ ದಿನೇ ಕಡಿಮೆ ಆಗುವುದು.

ಮನೆಯ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ. ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಠು ಒಳ್ಳೆಯದು. ಸಿಟ್ಟಿನ ಭರದಲ್ಲಿ ಕೊಯ್ದುಕೊಂಡ ಮೂಗನ್ನು ಜೋಡಿಸಲು ಆಗುವುದಿಲ್ಲ. ಈದಿನ ಹೆಚ್ಚಿನ ತಾಳ್ಮೆ ಅಗತ್ಯ.

ಸ್ವಾರ್ಥಿಯಾಗಿ ಬದುಕುವ ಚಿಂತನೆ ಬಿಟ್ಟು ಎಲ್ಲರ ನೆರವಿಗೂ ಧಾವಿಸಿ. ನಿಮ್ಮ ವಿಚಾರಧಾರೆಗಳನ್ನು ನಿಮ್ಮ ಸ್ನೇಹಿತರ ಸಲಹೆಯನ್ನು ಪುರಸ್ಕರಿಸಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆರೋಗ್ಯದ ಕಡೆ ಗಮನ ನೀಡಿರಿ.

 

ಗೆಳೆಯನ ಸ್ನೇಹವನ್ನು ಮರಳಿ ಗಳಿಸಲು ಒಂದು ಮುಗುಳು ನಗು ಸಾಕು. ಅಹಂಕಾರವನ್ನು ಬದಿಗೊತ್ತಿ ಸ್ನೇಹಿತನಿಗೆ ಸಹಾಯ ಮಾಡುವಿರಿ. ಮಕ್ಕಳ ಪ್ರಗತಿಯು ನಿಮ್ಮನ್ನು ಈದಿನ ಸಂತೋಷ ಪಡಿಸುವುದು. ಆರ್ಥಿಕ ಸ್ಥಿತಿ ಉತ್ತಮ.

 

ನೀವು ಏನೆನ್ನುವುದು ಪುನಃ ಸಾಬೀತು ಪಡಿಸುವ ಕಾಲ ಇದು. ಎಷ್ಟು ಎಚ್ಚರಿವಿದ್ದರೂ ಕಡಿಮೆಯೆ. ಗಂಡನ ಮಾತಿನಲ್ಲಿ ನಂಬಿಕೆಯಿಡಿ. ಅನೀರೀಕ್ಷಿತ ಧನಲಾಭ. ಭಾವನಾತ್ಮಕವಾಗಿ ಜನರನ್ನು ಸೆಳೆದು ಮೆಚ್ಚುಗೆ ಗಿಟ್ಟಿಸಿಕೊಳ್ಳುವಿರಿ.

 

ಸಂಬಂಧಿಗಳೊಂದಿಗೆ ಸ್ನೇಹದಿಂದ ವ್ಯವಹರಿಸಿರಿ. ಅವರಲ್ಲಿ ಆತ್ಮವಿಶ್ವಾಸ ತುಂಬಿ ಹಣದ ಸಹಾಯವೇ ಆಗಬೇಕೆಂದಿಲ್ಲ. ಕಷ್ಟದಲ್ಲಿರುವವರಿಗೆ ಸಾಂತ್ವನ ನೀಡುವುದು ಅವರಿಗೆ ಮಾಡುವ ಉಪಕಾರ ಎಂದೆ ಭಾವಿಸುವರು

 

ಮನೆಯ ಹಿರಿಯರ ಆರೋಗ್ಯದತ್ತ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಧಾರಾಳತನವೇ ಕೆಲವೊಮ್ಮೆ ಪೇಚಿಗೆ ಸಿಲುಕಿಸುವುದು. ಹಾಗಾಗಿ ಕೆಲವು ಸಂದರ್ಭದಲ್ಲಿ ಸಕಾರಾತ್ಮಕ ಉತ್ತರ ನೀಡುವುದು ಒಳ್ಳೆಯದು.

 

ಹಣದ ಮುಗ್ಗಟ್ಟು ತೀವ್ರವಾಗುವುದು. ಕೆಲವು ವಿಷಯಗಳಿಗೆ ಸಂಬಂಧಪಟ್ಟಂತೆ ಸ್ನೇಹಿತರಿಂದ ಹಣವನ್ನು ಸಾಲವಾಗಿ ಪಡೆಯುವಿರಿ. ಆಸ್ತಿ ಸಂಬಂಧಪಟ್ಟ ವ್ಯವಹಾರಗಳಲ್ಲಿ ಮಧ್ಯಸ್ಥಿಕೆ ಜನರಿಂದ ಒಳಿತಾಗುವುದು.

ತುಂಬಾ ದಿನಗಳಿಂದ ಬಾಕಿ ಇದ್ದ ಕೆಲಸಗಳು ಇಂದು ಸಲೀಸಾಗಿ ಮುಗಿಯುತ್ತವೆ. ನಿಮ್ಮಲ್ಲಿ ಆತ್ಮವಿಶ್ವಾಸ ಗರಿಕೆದರಿ ನಿಲ್ಲುವುದು. ಮಹತ್ತರ ಯೋಜನೆಗಳಲ್ಲಿ ಹಣವನ್ನು ತೊಡಗಿಸುವಿರಿ.

 

 

ಅತಿಥಿಗಳ ದಿಢೀರ್ ಆಗಮನದಿಂದ ಹೊಸ ಸಂಚಲನ ಉಂಟಾಗುವುದು. ದೀರ್ಘಕಾಲದ ಬದ್ಧತೆಗಳಿಗೆ ಕೈಹಾಕುವ ಮುನ್ನ ಯೋಚಿಸಿರಿ. ನಿಮ್ಮ ಮನಸ್ಸಿಗೆ ಇಷ್ಠವಾಗುವ ಕೆಲವು ವಿಚಾರಗಳು ನಿಮಗೆ ತಿಳಿದು ಬರುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುವುದು.

ಹೊಸ ತರಹದ ಆಲೋಚನೆಗಳು ಇಂದು ನಿಮ್ಮನ್ನು ಮುತ್ತಿಕೊಳ್ಳುವವು. ಅವನ್ನು ಕಾರ‌್ಯಗತದಲ್ಲಿ ತರಬೇಕೆಂಬ ಹೆಬ್ಬಯಕೆಯು ಮರೀಚಿಕೆಯಾಗಿಯೇ ಉಳಿದುಕೊಳ್ಳುವುದು. ನಿರಾಶರಾಗಬೇಡಿ. ಇಂದಿನ ಸೋಲು ನಾಳೆಯ ಗೆಲುವನ್ನು ತರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top