fbpx
ಸಮಾಚಾರ

ಡಿಸೆಂಬರ್ 15: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಭಾನುವಾರ, ಡಿಸೆಂಬರ್ 15 2019
ಸೂರ್ಯೋದಯ : 6:33 am
ಸೂರ್ಯಾಸ್ತ: 5:55 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಕೃಷ್ಣಪಕ್ಷ
ತಿಥಿ : ತೃತೀಯಾ 07:18
ನಕ್ಷತ್ರ: ಪುಷ್ಯ 28:01
ಯೋಗ: ಬ್ರಹ್ಮ 07:26
ಕರಣ:ವಿಷ್ಟಿ 07:18 ಬಾವ 18:27

ಅಭಿಜಿತ್ ಮುಹುರ್ತ:11:52 am – 12:37 pm
ಅಮೃತಕಾಲ : 9:54 pm – 11:26 pm

ರಾಹುಕಾಲ- 4:27 pm – 5:52 pm
ಯಮಗಂಡ ಕಾಲ- 12:14 pm – 1:38 pm
ಗುಳಿಕ ಕಾಲ- 3:03 pm – 4:27 pm

 

 

ಸದಾ ಪರರ ಹಿತವನ್ನು ಬಯಸುವ ನೀವು ಇಂದು ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಪರರನ್ನು ಅವಲಂಬಿಸಬೇಕಾಗುವುದು. ಮನೆ ಸದಸ್ಯರನ್ನು ಪ್ರೀತಿ ವಿಶ್ವಾಸದಿಂದ ಗೆದ್ದಲ್ಲಿ ಜಗತ್ತನ್ನೇ ಗೆದ್ದ ಅನುಭವವಾಗುವುದು.

ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನೀವು ಬಯಸುತ್ತಿದ್ದ ಪದವಿ ನಿಮ್ಮ ಮನೆ ಬಾಗಿಲಿಗೇ ಬರುವುದು. ಮನೆಯಲ್ಲಿನ ಗುರುಹಿರಿಯರ ಆಶೀರ್ವಾದ ಪಡೆಯಿರಿ. ಹಣದ ಖರ್ಚಿನ ಬಗ್ಗೆ ಕೈ ಹಿಡಿತವಿರಲಿ.

ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಆದರೆ ಈದಿನ ನಿಮಗೆ ಸರಿಯಾದ ಮಾರ್ಗ ತೋರುವ ಗುರುವಿನ ಅವಶ್ಯಕತೆ ಇದೆ. ಯಾವುದಕ್ಕೂ ದಿಢೀರನೇ ನಿರ್ಧಾರ ತೆಗೆದುಕೊಳ್ಳದಿರಿ. ಆರೋಗ್ಯದ ಕಡೆ ಗಮನವಿರಲಿ.

ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಸಫಲವಾಗುವುದಿಲ್ಲ. ನಿಮ್ಮ ಕಾರ್ಯಕ್ಷೇತ್ರದ ಇತಿಮಿತಿಗಳನ್ನು ಅರಿತು ಕಾರ್ಯ ನಿರ್ವಹಿಸಿದಲ್ಲಿ ಒಳಿತಾಗುವುದು. ಇಲ್ಲವೇ ಅನಗತ್ಯ ಟೀಕೆಗಳಿಗೆ ಗುರಿ ಆಗುವಿರಿ. ಪ್ರಮುಖ ನಿರ್ಧಾರಗಳನ್ನು ಮುಂದೂಡಿ.

 

ಮೋಡ ಕರಗಿ ಶುಭ್ರ ಆಗಸದಂತೆ ಈದಿನ ನಿಮ್ಮ ಮನಸ್ಸಿನ ಕಾರ್ಮೋಡ ಕರಗಿ ಶುಭ ಸಮಯವನ್ನು ಕಾಣುವಿರಿ. ಮಹತ್ವದ ಪತ್ರಾಗಮನದಿಂದ ವೃತ್ತಿಯಲ್ಲಿ ಹೆಚ್ಚಿನ ಆದಾಯ ಕಂಡು ಬರುವುದು. ದೈವಾನುಕೂಲತೆಯು ನಿಮಗೆ ಲಭ್ಯವಾಗಲಿದೆ.

 

ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎನ್ನುವರು. ಹಾಗಾಗಿ ಕೆಲವೊಮ್ಮೆ ನಿಷ್ಠುರತೆಯು ನಿಮ್ಮ ಗೌರವವನ್ನು ಹೆಚ್ಚಿಸುವುದು. ಇದರಿಂದ ನಿಮ್ಮ ಬಾಳಿನಲ್ಲಿ ಸಂತಸ ಹೆಚ್ಚಾಗುವುದು. ಒಳ್ಳೆಯ ಸುದ್ದಿಗಳನ್ನು ಇಂದು ಕೇಳುವಿರಿ. ಮೇಲಧಿಕಾರಿಗಳ ಬೆಂಬಲ ಇರುವುದು.

 

ದುಡಿಮೆಯೇ ದುಡ್ಡಿನ ತಾಯಿ ಎಂದು ಅರಿತಿರುವ ನೀವು ಸದಾ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಮಗ್ನರಾಗಿರುವಿರಿ. ಆದಾಗ್ಯೂ ಕೆಲವರು ನಿಮ್ಮನ್ನು ಕುರಿತು ಅಪಹಾಸ್ಯ ಮಾಡುವರು. ಅಂತಹವರ ಬಗ್ಗೆ ಉದಾಸೀನ ತಾಳುವುದೇ ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮ.

 

ನಿಮ್ಮ ಹೊಣಿಗಾರಿಕೆಗೆ ಹೆದರದೆ ಮುನ್ನುಗ್ಗುವಿರಿ. ಮನೆಯ ಹಿರಿಯರ ಆರೋಗ್ಯದತ್ತ ಗಮನ ಹರಿಸಿರಿ. ನಿಮ್ಮ ಧಾರಾಳತನವೇ ನಿಮಗೆ ಶ್ರೀರಕ್ಷೆ ಆಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಕಷ್ಟದಲ್ಲಿರುವ ನಿಮ್ಮ ಸಂಬಂಧಿಕರಿಗೆ ಅಥವಾ ಮಗಳಿಗೆ ಧನಸಹಾಯ ಮಾಡುವಿರಿ. ಅಥವಾ ಅವರು ನಿರಾಶಾರಾಗದಂತೆ ಒಳ್ಳೆಯ ಮಾತುಗಳಿಂದ ಅವರಿಗೆ ಧೈರ್ಯ ತುಂಬುವಿರಿ. ಕಷ್ಟದಲ್ಲಿರುವಾಗ ಸಹಾಯ ಮಾಡುವವನೇ ನಿಜವಾದ ಬಂಧು.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದರು ದಾಸರು. ಇಂದಿನ ನಿಮ್ಮ ಕಾರ್ಯಗಳು ಸುಗಮವಾಗಿ ಆಗಲು ನಿಮ್ಮಲ್ಲಿನ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಬೇಕು. ಸೋತು ಗೆಲ್ಲುವುದು ಜಾಣರ ಲಕ್ಷ ಣ.

 

 

ನಿಮಗೆ ಬರುವ ಸಲಹೆ ಸಹಕಾರಗಳನ್ನು ಸ್ವೀಕರಿಸಿರಿ. ಆದರೆ ಪ್ರತ್ಯುತ್ತರವಾಗಿ ನೀವು ನಿಮ್ಮ ವಿಚಾರಧಾರೆಗಳನ್ನು ಹರಿಯಬಿಡದಿರಿ. ಕೆಲವೊಮ್ಮೆ ಇದರಿಂದ ಅಪಾರ್ಥಕ್ಕೆ ಎಡೆಮಾಡಿಕೊಡುವ ಸಂದರ್ಭವಿರುತ್ತದೆ.

ಪರೋಪಕಾರಿಗಳಾದ ನೀವು ಇತರರಿಗೆ ಸಹಾಯ ಮಾಡಿ ಅವರಿಂದಲೇ ಟೀಕೆಗೆ ಗುರಿಯಾಗುವ ಸಂದರ್ಭವಿದೆ. ಹಾಗಾಗಿ ಯಾರೂ ಕೇಳದೆ, ಬಯಸದೆ ಅವರಿಗೆ ಸಹಾಯ ಮಾಡದಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top