fbpx
ಸಮಾಚಾರ

ಡಿಸೆಂಬರ್ 17: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಮಂಗಳವಾರ, ಡಿಸೆಂಬರ್ 17 2019
ಸೂರ್ಯೋದಯ : 6:34 am
ಸೂರ್ಯಾಸ್ತ: 5:56 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಕೃಷ್ಣಪಕ್ಷ
ತಿಥಿ : ಷಷ್ಠೀ 25:37
ನಕ್ಷತ್ರ: ಮಖ 25:26
ಯೋಗ: ವಿಷ್ಕಂಭ 23:11
ಕರಣ: ಗರಿಜ 14:39 ವಾಣಿಜ 25:37

ಅಭಿಜಿತ್ ಮುಹುರ್ತ:11:53 am – 12:38 pm
ಅಮೃತಕಾಲ : 11:11 pm – 12:41 am

ರಾಹುಕಾಲ- 3:04 pm – 4:28 pm
ಯಮಗಂಡ ಕಾಲ- 9:26 am – 10:51 am
ಗುಳಿಕ ಕಾಲ- 12:15 pm – 1:39 pm

 

ಕಾಯಕವೇ ಕೈಲಾಸ ಎಂದು ನಂಬಿರುವ ನಿಮ್ಮನ್ನು ಯಾರೂ ಎದುರಿಸಿ ಮಾತನ್ನು ಆಡುವುದಿಲ್ಲ. ಬದಲಾಗಿ ನಿಮ್ಮ ಕಾಯಕ ನಿಷ್ಠೆಗೆ ಗೌರವ ತೋರುವರು. ಆರೋಗ್ಯದ ಸ್ಥಿತಿ ಉತ್ತಮವಾಗಿ ಖರ್ಚಿಗೆ ತಕ್ಕಷ್ಟು ಹಣ ದೊರೆಯುವುದು.

ಕೆಲವೊಮ್ಮೆ ನೀವಾಡುವ ಮಾತುಗಳಿಂದಲೇ ನಿಷ್ಠುರವನ್ನು ಹೊಂದುವಿರಿ. ಆದಷ್ಟು ಪರರಿಗೆ ನೋವು ಉಂಟಾಗುವ ಮಾತುಗಳನ್ನು ಆಡದೆ ಇರುವುದು ಕ್ಷೇಮಕರ. ಹಣಕಾಸಿನ ತೊಂದರೆ ಇರುವುದಿಲ್ಲ.

ತಕ್ಕಡಿಯಂತೆ ಸಮತೋಲನ ಕಾಯ್ದುಕೊಳ್ಳಲು ಕೊಟ್ಟ ಮಾತಿನಂತೆ ನಡೆಯುವುದು ಕ್ಷೇಮಕರ. ಈ ಹಿಂದೆ ಮಾಡಿದ ವಾಗ್ದಾನಗಳನ್ನು ಪೂರೈಸದೆ ಇದ್ದ ಕಾರಣ ಆತ್ಮೀಯ ಗೆಳೆಯನೇ ಇಂದು ನಿಮಗೆ ಕೈಕೊಡುವನು. ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ.

ನಿಮ್ಮ ಬಾಳಿಗೆ ಸಂತೋಷ ತುಂಬುವ ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ನಿಮ್ಮ ತಂದೆಯ ಸ್ನೇಹಿತರು ಇಂದು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಉನ್ನತಾಧಿಕಾರಿಗಳ ಕುರಿತು ನಿಮಗೆ ಸೂಕ್ತ ಮಾರ್ಗದರ್ಶನ ದೊರೆಯುವುದು.

 

ಕೆಲವು ಕಾರ್ಯಗಳಲ್ಲಿ ಹಿನ್ನಡೆಯನ್ನು ಆನುಭವಿಸುವಿರಿ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರುವುದು ಉತ್ತಮ ಮತ್ತು ಹಣಕಾಸಿನ ವಿಷಯದಲ್ಲಿ ಜಾಮೀನಿಗೆ ಸಹಿ ಹಾಕದಿರುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

 

ನಿಮ್ಮ ಕನಸನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ಕಾಲ. ನಿಮ್ಮ ಆಂತರ್ಯದ ಭಾವನೆಗಳನ್ನು ಸ್ನೇಹಿತರು, ಬಂಧುಬಾಂಧವರ ಮುಂದೆ ವ್ಯಕ್ತಪಡಿಸಿರಿ. ಅವರುಗಳು ಅದಕ್ಕೆ ಸೂಕ್ತ ದಾರಿಯನ್ನು ತೋರಬಲ್ಲರು.

 

ನೀವು ಜನರನ್ನು ಪ್ರಭಾವಿತರನ್ನಾಗಿಸುವಿರಿ. ಉತ್ತಮ ಮಾರ್ಗದರ್ಶಕರಾದ ನಿಮಗೆ ನಿಮ್ಮ ವೃತ್ತಿ ಜೀವನವು ಉತ್ತಮವಾಗಿದ್ದು ಪರರಿಗೆ ಅದು ದಾರಿದೀಪವಾಗುವುದು. ಹಣಕಾಸಿನ ಸಮಸ್ಯೆ ಇರುವುದಿಲ್ಲ. ಮನೆಯಲ್ಲೂ ನೆಮ್ಮದಿಯ ವಾತಾವರಣ ಇರುತ್ತದೆ.

 

ಈ ದಿನ ಯಾರನ್ನೂ ಅತಿಯಾಗಿ ನಂಬದಿರಿ. ನೀವೇ ಸೃಷ್ಟಿಸಿಕೊಂಡಿರುವ ಬಿಕ್ಕಟ್ಟನ್ನು ನೀವೇ ಪರಿಹರಿಸಿಕೊಳ್ಳಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆತ್ಮೀಯ ಸ್ನೇಹಿತರು ನಿಮಗೆ ಸಹಾಯ ಹಸ್ತ ಚಾಚುವರು.

 

ಈ ಹಿಂದೆ ನಿಮ್ಮಿಂದಾದ ತಪ್ಪನ್ನು ಇಂದು ಎತ್ತಿ ತೋರಿಸಿ ನಿಮಗೆ ಅವಮಾನ ಮಾಡಬೇಕೆಂದು ಕೆಲವರು ಹವಣಿಸುವರು. ದೈವಕೃಪೆಯಿಂದ ಇದು ನಿಮಗೆ ಮೊದಲೇ ತಿಳಿಯುವುದರಿಂದ ಆ ಬಗ್ಗೆ ಅಲರ್ಟ್‌ ಆಗುವಿರಿ.

ಈ ದಿನ ಪ್ರಮುಖವಾಗಿ ಹತಾಶ ಭಾವನೆಯಿಂದ ಹೊರಬಂದು ಹೊಸ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡುವಿರಿ. ಈ ಸಂದರ್ಭವನ್ನು ನಿಭಾಯಿಸಲು ಬೇಕಿರುವುದು ಜಾಣತನ ಮತ್ತು ಆತ್ಮವಿಶ್ವಾಸ.

 

 

ಸ್ನೇಹಿತರು ಮತ್ತು ಬಂಧುಗಳ ಜೊತೆಯಲ್ಲಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದ ಸಮಯ ಕೊನೆಯಾಗುವ ದಿನವಿದು. ನಿಮ್ಮ ಧೋರಣೆಯಲ್ಲಿಯೂ ಗಣನೀಯ ಬದಲಾವಣೆ ಕಂಡುಬರುವುದು.

ದೈವಕೃಪೆ ಇರುವುದರಿಂದ ಈ ದಿನ ನೀವು ಮುಟ್ಟಿದ್ದೆಲ್ಲ ಚಿನ್ನ ಅರ್ಥಾತ್‌ ಮನೋರಥಗಳು ಪೂರ್ಣಗೊಳ್ಳುವವು. ನಿರುದ್ಯೋಗಿಗಳಿಗೆ ಖುಷಿ ಕೊಡುವ ವಿದ್ಯಮಾನಗಳು ನಡೆಯುವವು. ಕುಟುಂಬದಲ್ಲಿ ನೆಮ್ಮದಿಯೆರಿವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top