fbpx
ಸಮಾಚಾರ

“ಮುಸ್ಲಿಮರಿಗೆ ವಿರೋಧ ಪಕ್ಷಗಳು ಭಯ ಹುಟ್ಟಿಸುತ್ತಿವೆ” ಪ್ರಧಾನಿ ನರೇಂದ್ರ ಮೋದಿ ಆರೋಪ!

ಕಾಂಗ್ರೆಸ್‌ ಪಕ್ಷಕ್ಕೆ ಧೈರ್ಯವಿದ್ದರೆ ಪ್ರತಿ ಪಾಕಿಸ್ತಾನ ಪ್ರಜೆಗೂ ಭಾರತೀಯ ಪೌರತ್ವ ನೀಡುವುದಾಗಿ ಘೋಷಿಸಲಿ ಎಂದು ಪ್ರಧಾನಿ ಮೋದಿ ಸವಾಲು ಎಸೆದಿದ್ದಾರೆ. ಜಾರ್ಖಂಡ್‌ನ ಬರ್ಹೆಟ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ ಮುಸ್ಲಿಮರ ನಡುವೆ ಭಯ ಹರಡುವ ಕೆಲಸವನ್ನು ವಿರೋಧ ಪಕ್ಷ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

 

 

ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅದರ ಮೈತ್ರಿ ಪಕ್ಷಗಳಿಗೆ ನಾನು ಬಹಿರಂಗ ಸವಾಲು ಹಾಕುತ್ತಿದ್ದೇನೆ ಎಂದು ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಮಾತನಾಡಿದ ಮೋದಿ ” ಪ್ರತಿಯೊಬ್ಬ ಪಾಕಿಸ್ತಾನಿಯನ್ನು ಭಾರತೀಯ ಪ್ರಜೆಯನ್ನಾಗಿ ಮಾಡಬೇಕೆಂಬುದು ನಮ್ಮ ಇಚ್ಛೆ ಎಂದು ಕಾಂಗ್ರೆಸ್ ಘೋಷಿಸಲಿ ಎಂದು ಪ್ರಧಾನಿ ಮೋದಿ ಸವಾಲು ಹಾಕಿದರು. ಮುಸ್ಲಿಮರ ವಿರುದ್ಧ ವಿರೋಧ ಪಕ್ಷಗಳು ಭಯ ಹುಟ್ಟಿಸುತ್ತಿವೆ” ಎಂದು ಆರೋಪಿಸಿದರು.

‘ಸುಳ್ಳು ಮತ್ತು ಭಯಗಳನ್ನು ಹರಡುವ ಮೂಲಕ ಕಾಂಗ್ರೆಸ್‌ ಪಕ್ಷವು ರಾಜಕೀಯ ಮಾಡಲು ಹೊರಟಿದೆ. ನಾವು ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ಭಾರತೀಯ ನಾಗರಿಕನ ಮೇಲೆ ಪರಿಣಾಮ ಬೀರುವುದಿಲ್ಲ‘ ಎಂದು ಮತ್ತೊಮ್ಮೆ ಭರವಸೆ ನೀಡುವುದಾಗಿ ಮೋದಿ ಪುನರುಚ್ಚರಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top