fbpx
ಸಮಾಚಾರ

ಪಾಕ್ ಮಾಜಿ ಅಧ್ಯಕ್ಷ ಮುಷರಫ್‍ಗೆ ಗಲ್ಲು ಶಿಕ್ಷೆ!

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಗಲ್ಲು ಶಿಕ್ಷೆ ವಿಧಿಸಿದೆ. 2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ[ಪಾಕಿಸ್ತಾನ] ತುರ್ತು ಪರಿಸ್ಥಿತಿ ಹೇರಿದ್ದು, 2013ರಲ್ಲಿ ಅವರ ವಿರುದ್ಧ ಪರ್ವೇಜ್ ಮುಷರಫ್ ವಿರುದ್ಧ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಪರ್ವೇಜ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ.

ಪೇಶಾವರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಶೇಷ ನ್ಯಾಯಮಂಡಳಿಯ ತ್ರಿಸದಸ್ಯ ಪೀಠ 2:1 ಅನುಪಾತದಲ್ಲಿ ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದೆ. ಈ ಮೂಲಕ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಗಲ್ಲು ಶಿಕ್ಷೆಗೆ ಒಳಗಾದ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಫ್ ಪಾತ್ರರಾಗಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಧಿಕಾರಾವಧಿಯಲ್ಲಿ ಮುಷರಫ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. 2007ರ ನವೆಂಬರ್ ನಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ಅನಗತ್ಯ ಮತ್ತು ಬಲವಂತ, ದುರುದ್ದೇಶಪೂರಿತ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರು. 2013ರವರೆಗೂ ಈ ಪ್ರಕರಣದ ವಿಚಾರಣೆ ನೆನೆಗುದಿಗೆ ಬಿದ್ದಿತ್ತು. ನವಾಜ್ ಷರೀಫ್ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಈ ಪ್ರಕರಣದ ವಿಚಾರಣೆಗೆ ಆದೇಶ ನೀಡಿದ್ದರು. ಬಳಿಕ ಮುಷರಫ್ ಲಂಡನ್ ಗೆ ಪಲಾಯನ ಗೈದಿದ್ದರು.

ದೇಶದ್ರೋಹ ಪ್ರಕರಣದಂತಹ ಗಂಭೀರ ಆರೋಪ ಎದುರಿಸುತ್ತಿದ್ದ ಫರ್ವೇಜ್ ಮುಷರಫ್​ ಕಳೆದ ನಾಲ್ಕು ವರ್ಷದ ಹಿಂದೆ ಲಂಡನ್​ ಗೆ ಪಲಾಯನ ಗೈದಿದ್ದರು. ಆದರೆ, ಕಳೆದ ಚುನಾವಣೆ ವೇಳೆಗೆ ಮತ್ತೆ ಪಾಕಿಸ್ತಾನಕ್ಕೆ ಆಗಮಿಸಿದ್ದ ಮುಷರಫ್ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಷರಫ್ ಮೇಲಿನ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಪಾಕಿಸ್ತಾನ ಸೇನೆಯ ಸೇನಾಧಿಕಾರಿಯಾಗಿದ್ದ ಮುಷರಫ್​ 1999 ರಿಂದ 2008ರ ವರೆಗೆ ಪಾಕಿಸ್ತಾನದ ಸರ್ವಾಧಿಕಾರಿ ಅಧಿಕಾರ ನಡೆಸಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ಇವರ ಕಾಲದಲ್ಲೇ ನಡೆದಿತ್ತು ಎಂಬುದನ್ನು ಗಮನಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top