ಸಾಕಷ್ಟು ವರ್ಷಗಳಿಂದ ಸುದೀಪ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದ ನಂದೀಶ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಂದೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಭಿಮಾನಿಯ ಸಾವಿಗೆ ಮರುಗಿದ ಅಭಿನಯ ಚಕ್ರವರ್ತಿ ಅಭಿಮಾನಿಯ ಫೋಟೋವನ್ನ ಟ್ವಿಟರ್ ಡಿಪಿ ಆಗಿ ಬದಲಾಯಿಸಿಕೊಂಡಿದ್ದಾರೆ.
Unable to stil accept tat my dear dear brother #Nandish is Nomore. Been with us for years.
U wil be missed my brother. Truly an irreplaceable loss.
My condolences to his family and all my friends to whom he meant everything.#RIPNandish. pic.twitter.com/WeEFrLTPdk— Kichcha Sudeepa (@KicchaSudeep) December 19, 2019
ಸುದೀಪ್ ಅಪ್ಪಟ ಅಭಿಮಾನಿ ಮಾತ್ರವಲ್ಲದೆ ಸಹೋದರನಂತೆ ಇದ್ದರು. ನಂದೀಶ್ ನಿಧನದ ಸುದ್ದಿ ಕೇಳಿ ಸುದೀಪ್ ಟ್ವಿಟ್ಟರ್ ನಲ್ಲಿ ನೋವು ಹಂಚಿಕೊಂಡಿದ್ದಾರೆ. ಅಲ್ಲದೆ ಕಿಚ್ಚ ಟ್ವಿಟ್ಟರ್ ಡಿಪಿ ಬದಲಾಯಿಸಿ ನಂದೀಶ್ ಫೋಟೋ ಡಿಪಿಗೆ ಹಾಕಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
— Kichcha Sudeepa (@KicchaSudeep) December 19, 2019
“ ನನ್ನ ಸಹೋದರ ಸ್ಥಾನದಲ್ಲಿದ್ದ ನಂದೀಶ್ ಅವರ ಸಾವಿನ ಸುದ್ದಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನಾನು ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ . ನಿಮ್ಮ ಅಗಲುವಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ಕುಟುಂಬಕ್ಕೆ ನೀಡಲಿ. ನಿಮ್ಮ ಕುಟುಂಬದ ಜೊತೆ ಸದಾ ನಾನಿರುತ್ತೇನೆ “ ಎಂದು ಬರೆದುಕೊಂಡಿದ್ದಾರೆ. ಎಂದು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ನಂದೀಶ್ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ.
ಇನ್ನು ಮೃತ ಅಭಿಮಾನಿಯ ಮನೆಗೆ ಇಂದು ಬೆಳಿಗ್ಗೆ ಭೇಟಿ ನೀಡಿರುವ ಸುದೀಪ್ ದುಃಖದಲ್ಲಿರುವ ನಂದೀಶ್ ಕುಟುಂಬವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.
ನಮ್ಮ ಪ್ರೀತಿಯ @KicchaSudeep ಅಣ್ಣ ಅಪಘಾತದಲ್ಲಿ ಮಡಿದ ಅಭಿಮಾನಿ ನಂದೀಶ್ ರವರ ಮನೆಗೆ ಇಂದು ಭೇಟಿ ನೀಡಿದರು 🙏🙏 pic.twitter.com/bs4d0EyNJC
— KSSS Official ® (@KSSS_Official_) December 20, 2019
ನಮ್ಮ ಪ್ರೀತಿಯ @KicchaSudeep ಅಣ್ಣ ಅಪಘಾತದಲ್ಲಿ ಮಡಿದ ಅಭಿಮಾನಿ ನಂದೀಶ್ ಮನೆಗೆ ಇಂದು ಭೇಟಿ ನೀಡಿ ಸಂಬಂಧಿಕರನ್ನು ಸಂತೈಸಿದರು 🙏🙏🙏 pic.twitter.com/QM3mdSf8FN
— KSSS Official ® (@KSSS_Official_) December 20, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
