fbpx
ಸಮಾಚಾರ

ಮುಖವಾಡ ತೆಗೆಯಲು ನಿರ್ಧರಿಸದರೇ ವಿನೋದ್ ರಾಜ್? ಸಿನಿ ಪ್ರೇಮಿಗಳಿಗೆ ಅಚ್ಚರಿಯ ಸುದ್ದಿ

ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ.. 80ರ ದಶಕದಲ್ಲಿ ತಮ್ಮ ಡ್ಯಾನ್ಸ್ ಮೂಲಕವೇ ಮನಗೆದ್ದಿದ್ದ ವಿನೋದ್ ರಾಜ್ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿಯೋ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ವರ್ಷಗಳು ಉರುಳುತ್ತಿದ್ದಂತೆ ಅನಾರೋಗ್ಯದ ಕಾರಣಕ್ಕಾಗಿ ಚಿತ್ರರಂಗದಿಂದ ವಿನೋದ್ ದೂರ ಉಳಿದಿದ್ದರು. ಇದೀಗ ಅವರು ಮತ್ತೆ ಸಿನಿಮಾ ಮಾಡುವ ಸಮಯ ಬಂದಿದೆ.

‘ಮುಖವಾಡ’ ಎಂಬ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ರನ್ನು ಕರೆತರುವ ತಯಾರಿ ನಡೆಸಿದೆ. ಸಿನಿಮಾದ ಒಂದು ಪಾತ್ರವನ್ನು ಅವರಿಂದ ಮಾಡಿಸುವ ಆಸೆ ಚಿತ್ರತಂಡದಾಗಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದು, ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಚಿತ್ರತಂಡ ತಿಳಿಸಿದೆ.

ಎಸ್ ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಸಸ್ಪೆನ್ಸ್‌ ಥ್ರಿಲ್ಲರ್ ಫಿಲ್ಮ್ ‘ಮುಖವಾಡ’ ದಲ್ಲಿ ನಾಯಕನಟ ಪವನ್ ತೇಜ್‌ಗೆ ಶಿಲ್ಪಾ ಮಂಜುನಾಥ್ ಜೋಡಿಯಾಗಿ ಮಿಂಚಲಿದ್ದಾರೆ. ಹಾಗೂ ಸಹದೇವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಚಿತ್ರದ ಮುಖ್ಯ ಪಾತ್ರದಲ್ಲಿ ವಿನೋದ್ ರಾಜ್ ಕಾಣಿಸಿಕೊಳ್ಳಬೇಕು ಎನ್ನುವುದು ಚಿತ್ರತಂಡ ಆಸೆಯಾಗಿದ್ದು ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು ಅವರ ನಿರ್ಧಾರಕ್ಕೆ ಕಾಯುತ್ತಿದ್ದಾರೆ.

ಅಂದಹಾಗೆ ಕೊನೆಯದಾಗಿ 2009ರಲ್ಲಿ ‘ಯಾರದು’ ಎಂಬ ಸಿನಿಮಾ ವಿನೋದ್ ರಾಜ್ ನಟಿಸಿದ್ದರು, ಆ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಒಂದು ವೇಳೆ ಮುಖವಾಡ ಸಿನಿಮಾವನ್ನು ಒಪ್ಪಿಕೊಂಡರೆ ಬರೋಬ್ಬರಿ 10 ವರ್ಷಗಳ ನಂತರ ತೆರೆ ಅವರನ್ನು ನೋಡಬಹುದು ಹಾಗೆ ಅಭಿಮಾನಿಗಳಿಗೂ ಖುಷಿ ಆಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top