fbpx
ಸಮಾಚಾರ

ಖ್ಯಾತ ಹಾಸ್ಯನಟ ಅಲಿ ಅವರ ತಾಯಿ ವಿಧಿವಶ!

ಟಾಲಿವುಡ್‌ ಸಿನಿ ಪ್ರೇಮಿಗಳ ಮನಗೆದ್ದ ಖ್ಯಾತ ಹಾಸ್ಯ ನಟ ಅಲಿ ಅವರ ತಾಯಿ ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದ ಜೈತುನ್ ಬೀಬಿ ಅವರು ವಿಧಿವಶರಾಗಿದ್ದಾರೆ. ಗುರುವಾರ ಬೆಳಗ್ಗೆ ಅವರ ನಿವಾಸದಲ್ಲಿ ಜೈತುನ್ ಬೀಬಿ ಕೊನೆಯುಸಿರೆಳೆದಿದ್ದಾರೆ.

ಸಿನಿಮಾವೊಂದರ ಶೂಟಿಂಗ್‌ಗೆಂದು ರಾಂಚಿಗೆ ತೆರಳಿದ್ದ ಅಲಿ ವಿಚಾರ ತಿಳಿಯುತ್ತಿದ್ದಂತೆ ಹಿಂತಿರುಗಿದ್ದಾರೆ. ರಾಜಮಂಡ್ರಿಯಿಂದ ತಮ್ಮ ಹೈದರಾಬಾದ್ ನಿವಾಸಕ್ಕೆ ಜೈತುನ್ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ಗುರುವಾರ ಸಂಜೆ ಹೈದರಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆದಿದೆ.

ಅಲಿ ಅವರ ಸುಮಾರು 1000 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾಗಳಲ್ಲಿ ಅಲಿ ನಟಿಸಿದ್ದು, ಕನ್ನಡದಲ್ಲಿ ಸೂಪರ್ ಮತ್ತು ನಮೋ ಭೂತಾತ್ಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಆಲಿ ಅವರ ತಾಯಿಯ ನಿಧಾನಕ್ಕೆ ಚಿತ್ರರಂಗ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಆಲಿ ತಾಯಿಯ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top