fbpx
ಸಮಾಚಾರ

ಖ್ಯಾತ ನಟ ಸಿದ್ದಾರ್ಥ್ ಮೇಲೆ ಎಫ್ಐಆರ್ ದಾಖಲು!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣೀ(ಎನ್ ಆರ್ ಸಿ) ವಿರುದ್ಧ ತಮಿಳುನಾಡಿನಲ್ಲಿ ಪ್ರಮುಖವಾಗಿ ದನಿ ಎತ್ತಿರುವ ನಟ ಸಿದ್ದಾರ್ಥ್ ಸೇರಿದಂತೆ 600 ಮಂದಿ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣಾ ದಾಖಲಿಸಿಕೊಂಡಿದ್ದಾರೆ.

ಚೆನ್ನೈನ ವಲ್ಲೂವರ್​ ಕೊಟ್ಟಂನಲ್ಲಿ ಡಿಸೆಂಬರ್​ 19ರಂದು ನಡೆದ ಪ್ರತಿಭಟನೆಯಲ್ಲಿ ನಟ ಸಿದ್ಧಾರ್ಥ್​​​ ಮತ್ತು ಸಂಗೀತ ನಿರ್ದೇಶಕ ಟಿ.ಎಂ.ಕೃಷ್ಣ ಸೇರಿ ಇತರೆ ಸೆಲೆಬ್ರಿಟಿಗಳು ಅವರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿದ್ಧಾರ್ಥ್​ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು. ಇದೀಗ ಪ್ರತಿಭಟನೆಗೆ ನೀಡಿದ್ದ ಅನುಮತಿಯನ್ನು ಪೊಲೀಸರು ಹಿಂಪಡೆದುಕೊಂಡು ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿದ್ಧಾರ್ಥ್​, ಇದೊಂದು ತುಂಬಾ ಕಠಿಣವಾದ ಕಾನೂನಾಗಿದೆ. ಹೀಗಾಗಿ ನಾವು ಪ್ರತಿಭಟಿಸಲೇ ಬೇಕಾಗಿದೆ. ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಅಲ್ಲದೆ, ತಾಳ್ಮೆ ಕಳೆದುಕೊಳ್ಳದಂತೆ ಪ್ರತಿಭಟನಾಕಾರರಿಗೂ ಹೇಳಿದ್ದೇವೆ. ನಾವು ಒಟ್ಟಿಗೆ ಇದ್ದುಕೊಂಡು ಮಸೂದೆಯನ್ನು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುವ ಹಲವು ಹ್ಯಾಂಡಲ್‍ಗಳಿಂದ ತಮಗೆ ಬೆದರಿಕೆಗಳು ಬಂದಿವೆ ಎಂದು ನಟ ಸಿದ್ಧಾರ್ಥ್ ಈ ಹಿಂದೆ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top