fbpx
ಸಮಾಚಾರ

ಪೌರತ್ವ ತಿದ್ದುಪಡಿ: ರಜನಿಕಾಂತ್ ಟ್ವೀಟ್ ಗೆ ಬೆಂಬಲ, ಟೀಕೆಗಳ ಸುರಿಮಳೆ

ಸದ್ಯ ದೇಶದಲ್ಲಿ ನಾಗರಿಕತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಹೊತ್ತಿ ಉರಿತಿದೆ. ಬರೀ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದ ಈ ಪ್ರತಿಭಟನೆ ಇದೀಗ, ದೊಡ್ಡ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ರಾಜಕೀಯ ನಾಯಕರು ಹಾಗೂ ಅನೇಕ ಸಂಘಟನೆಗಳ ಮುಖಂಡರುಗಳು, ಸಿಎಎ ಕಾಯ್ದೆ ವಿರೋಧಿಸಿ, ರಸ್ತೆಗಿಳಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸೂಪರ್​ ಸ್ಟಾರ್​ ರಜಿನಿಕಾಂತ್​, ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

 

 

ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಗೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೌನ ಮುರಿದಿದ್ದು ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದಾರೆ . ರಜನೀಕಾಂತ್ ಅವರ ಈ ಟ್ವೀಟ್, ಟ್ವೀಟ್ಟರ್ ನಲ್ಲಿ ನಂಬರ್ 1 ಸ್ಥಾನ ಗಳಿಸಿದ್ದು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶದ್ಯಾಂತ ನಡೆಯುತ್ತಿರುವ ಪ್ರತಿಭಟನೆಯ ನನಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಆದರೆ ಅವರು ಯಾವುದೇ ಒಂದು ನಿರ್ದಿಷ್ಟ ಹಿಂಸಾಚಾರದ ಬಗ್ಗೆ ಹೇಳದೇ ಸದ್ಯ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಉಂಟಾಗುತ್ತಿರುವ ಹಿಂಸಾಚಾರ ನನಗೆ ನೋವು ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂಸಾಚಾರ ಮತ್ತು ಗಲಭೆಯೊಂದೇ ಸಮಸ್ಯೆಗಳಿಗೆ ಪರಹಾರವಲ್ಲ,ಭಾರತೀಯ ನಾಗರಿಕರು ರಾಷ್ಟ್ರದ ಭದ್ರತೆ ಮತ್ತು ಕಲ್ಯಾಣದ ಕುರಿತು ಒಗ್ಗಟ್ಟಿನಿಂದಿರಬೇಕು ಮತ್ತು ಜಾಗೃತರಾಗಿರಬೇಕು. ಆದರೇ ದೇಶಾದ್ಯಂತ ಹಿಂಸಾಚಾರವಾಗುತ್ತಿರುವುದು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ರಜಿನಿಕಾಂತ್​ ಅವರ ಈ ಟ್ವೀಟ್​ ಕೆಲವರಿಗೆ ಇಷ್ಟವಾಗಲಿಲ್ಲ. ಇದರಿಂದಾಗಿ ಅವರನ್ನು #ShameOnYouSanghiRajini ಎಂಬ ಹ್ಯಾಶ್​ಟ್ಯಾಗ್​​ ಹಾಕಿ ಟ್ರೋಲ್​ ಮಾಡುತ್ತಿದ್ದಾರೆ. ಟ್ವಿಟರ್​ನಲ್ಲಿ ರಜಿನಿ ಅವರನ್ನು ಟ್ರೋಲ್​ ಮಾಡಲಾರಂಭಿಸಿದ ನಂತರ ಅವರ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. # IStandWithRajinikanth ಎಂದು ರಜಿನಿ ಮಾಡಿರುವ ಟ್ವೀಟ್​ನ ವಿವರಣೆ ನೀಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top