fbpx
ಸಮಾಚಾರ

ಸೀಕ್ರೆಟ್ ಸಾಂತಾ ಕ್ಲಾಸ್ ಆಗಿ ಆಶ್ರಯ ಮನೆಯ ಮಕ್ಕಳಿಗೆ ಅಚ್ಚರಿ ನೀಡಿದ ವಿರಾಟ್: ವಿಡಿಯೋ

ವಿಶ್ವದೆಲ್ಲೆಡೆ ಕ್ರಿಸ್ಮಸ್ ಹಬ್ಬ ಆಚರಣೆಗೆ ತಯಾರಿ ನಡೆಯುತ್ತಿದೆ. ಹಬ್ಬದ ಪ್ರಯುಕ್ತ ಸಾಂತ ಕ್ಲಾಸ್ ಮಕ್ಕಳಿಗೆ ಚಾಕೋಲೆಟ್ ನೀಡುತ್ತಿರುವ ದೃಶ್ಯ ಎಲ್ಲೆಂದರಲ್ಲಿ ಕಂಡು ಬರುತ್ತಿದೆ. ಇದೀಗ ಮಕ್ಕಳಿಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಂತಾ ಕ್ಲಾಸ್ ಆಗಿದ್ದಾರೆ. ಕೊಹ್ಲಿ ಸಾಂತಾ ಕ್ಲಾಸ್ ವಿಡಿಯೋ ವೈರಲ್ ಆಗಿದೆ.

ಖಾಸಗಿ ವಾಹಿನಿಯೊಂದು ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೋಲ್ಕತ್ತಾದ ಆಶ್ರಮದಲ್ಲಿರುವ ಮಕ್ಕಳು ತಮ್ಮ ನೆಚ್ಚಿನ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಕ್ರಿಸ್ಟಿಯಾನೊ ರೊನಾಲ್ಡೊ, ಪಿ.ವಿ ಸಿಂಧು ಹಾಗೂ ಕ್ರಿಸ್ಮೆಸ್ ಸಮಯದಲ್ಲಿ ಇಷ್ಟವಾಗುವ ವಸ್ತುಗಳನ್ನು ನೀಡಬೇಕೆಂದು ಹೇಳಿದ್ದಾರೆ. ಮಕ್ಕಳು ಮಾತನಾಡಿದ ಈ ವಿಡಿಯೋವನ್ನು ವಿರಾಟ್ ಅವರು ನೋಡಿದ್ದಾರೆ.

 

 

ಮಕ್ಕಳ ವಿಡಿಯೋ ನೋಡಿದ ನಂತರ ವಿರಾಟ್ ಸಾಂತಾ ಕ್ಲಾಸ್‍ನಂತಯೆ ಉಡುಪು ಧರಿಸಿ, ಮಕ್ಕಳಿಗೆ ಉಡುಗೊರೆಯನ್ನು ಹಂಚಿದ್ದಾರೆ. ಉಡುಗೊರೆ ಎಲ್ಲ ಹಂಚಿದ ಬಳಿಕ ವಿರಾಟ್ ತಾವು ಹಾಕಿದ ನಕಲಿ ಗಡ್ಡವನ್ನು ತೆಗೆದಿದ್ದಾರೆ. ವಿರಾಟ್‍ರನ್ನು ನೋಡುತ್ತಿದ್ದಂತೆ ಮಕ್ಕಳು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ. ಅಲ್ಲದೆ ವಿರಾಟ್‍ರನ್ನು ತಬ್ಬಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ನಂತರ ಮಕ್ಕಳನ್ನು ‘ಸ್ಪೈಡರ್‌ಮ್ಯಾನ್‌ ಮತ್ತು ಸೂಪರ್‌ಮ್ಯಾನ್‌ ರಜೆಯಲ್ಲಿದ್ದಾರೆ. ಹಾಗಾಗಿ ಕೊಹ್ಲಿ ಭೇಟಿ ಮಾಡೋಕೆ ಇಷ್ಟ ಪಡುವಿರೇ?‘ ಎಂದು ಕೇಳಲಾಗಿದೆ. ಓ…ಎಂದು ಕೂಗುತ್ತ ಮಕ್ಕಳು ಹೌದು ಎನ್ನುತ್ತಿದ್ದಂತೆ, ವಿರಾಟ್‌ ಟೊಪ್ಪಿ ಮತ್ತು ಗಡ್ಡ ತೆಗೆದು ಮಕ್ಕಳ ಎದುರು ನಿಲ್ಲುತ್ತಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕಳೊಂದಿಗೆ ಸಮಯ ಕಳೆದಿರುವುದು ಹಾಗೂ ಅವರಿಗೆ ಅಚ್ಚರಿಯ ಉಡುಗೊರೆ ನೀಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top