fbpx
ಸಮಾಚಾರ

‘ಬ್ರೇಕಪ್’ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ‘ಕಿಸ್’ ನಟಿ ಶ್ರೀಲೀಲಾ!

‘ಕಿಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಶ್ರೀಲೀಲಾ ತನ್ನ ಬ್ಯುಟಿ ಇಂದಲೇ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ‘ಭರಾಟೆ’ ಹಾಗೂ ‘ಕಿಸ್‌’ ಎರಡೂ ಚಿತ್ರಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿದಂತ ಸಿನಿಮಾಗಳು. ತೆರೆ ಕಂಡು ಬಾಕ್ಸ್‌ ಆಫೀಸ್ ಕಲೆಕ್ಷನ್‌ ಪಡೆದ ಸಿನಿಮಾಗಳಲ್ಲಿ ನಟಿಸಿರುವ ಶ್ರೀ ಲೀಲಾ ವಿಹಾನ್ ಮುಖ್ಯಭೂಮಿಕೆಯ ಲೆಟ್ಸ್ ಬ್ರೇಕ್ಅಪ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ರೂಮರ್ ಹರಿದಾಡುತ್ತಿತ್ತು ಆದರೆ ಈ ಬಗ್ಗೆ ಸ್ವತಃ ಶ್ರೀಲೀಲಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಿರ್ದೇಶಕ ಸ್ವರೂಪ್‌ ಅವರ ಹೊಸ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ. ‘ಸ್ವರೂಪ್‌ ಅವರ ‘ಲೆಟ್ಸ್‌ ಬ್ರೇಕಪ್‌’ ಚಿತ್ರದಲ್ಲಿ ನಾನು ನಟಿಸಲಿದ್ದೇನೆ ಎಂಬ ಸುದ್ದಿ ಎಲ್ಲೆಡೆ ಕೇಳಿಬಂದಿದೆ. ಅದು ಹೇಗೆ ಈ ಸುದ್ದಿ ಹರಡಿತೋ ಗೊತ್ತಿಲ್ಲ ಎಂದಿದ್ದಾರೆ. ಆದರೆ ನಾನು ಇದುವರೆಗೆ ಯಾವ ಚಿತ್ರಕ್ಕೂ ಸಹಿ ಮಾಡಿಲ್ಲ. ನಾನು ಕಥೆಯನ್ನು ಕೇಳಿದ್ದೇನೆ ನಿಜ. ಆದರೆ, ಇನ್ನೂ ಆ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

‘ನನ್ನ ಎರಡೂ ಸಿನಿಮಾ ಬ್ಯಾಕ್‌ ಟು ಬ್ಯಾಕ್‌ ಒಂದೇ ವರ್ಷದಲ್ಲಿ ರಿಲೀಸ್‌ ಆಗಿದೆ. ಹಾಗಾಗಿ ಆತುರಪಡುತ್ತಿಲ್ಲ. ಮುಂದಿನ ವರ್ಷ ನನ್ನ ಪರೀಕ್ಷೆ ಮುಗಿಸಿಕೊಂಡು ಸ್ವಲ್ಪ ಬ್ರೇಕ್‌ ತಗೋಬೇಕು ಅಂತಿದ್ದೇನೆ. ನಂತರ ಸಿನಿಮಾದಲ್ಲಿ ನಟಿಸುವೆ. ಇನ್ನೊಂದು ತಿಂಗಳಲ್ಲಿ ನನ್ನ ಹೊಸ ಚಿತ್ರ ಯಾವುದು ಅಂತ ತಿಳಿಸುತ್ತೇನೆ’ ಎಂದು ಅವರು ಶ್ರೀಲೀಲಾ ತಿಳಿಸಿದ್ದಾರೆ.

ಅಂದಹಾಗೆ ‘ಜಯಣ್ಣ ಕಂಬೈನ್ಸ್’ ಮೂಲಕ ಅದ್ದೂರಿ ಆಗಿಯೇ ನಿರ್ಮಾಣ ಆಗಲಿರುವ ಈ ಸಿನಿಮಾಗೆ ಹೊಸ ನಿರ್ದೇಶಕ ಸ್ವರೂಪ್ ಆಕ್ಷನ್-ಕಟ್ ಹೇಳಲಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಇರುವ ಈ ಸಿನಿಮಾದಲ್ಲಿ ಪಂಚತಂತ್ರ ಸಿನಿಮಾ ಖ್ಯಾತಿಯ ವಿಹಾನ್ ನಾಯಕನಾಗಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top