fbpx
ಸಮಾಚಾರ

ತಂದೆ ಹಾದಿಯಲ್ಲಿ ಸಾಗಿದ ಮಗ: ಅಂಡರ್ 14 ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿದ ದ್ರಾವಿಡ್ ಪುತ್ರ!

ಟೀಂ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಅಪ್ಪನಂತೆ ಬ್ಯಾಟಿಂಗ್‍ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೌಲಿಂಗ್‍ನಲ್ಲೂ ಅದ್ಭುತ ಪ್ರದರ್ಶನ ನೀಡಿ ಅಂಡರ್ 14 ಕ್ರಿಕೆಟ್‍ನಲ್ಲಿ ಭರ್ಜರಿ ಮಿಂಚಿದ್ದಾರೆ.

ವಿವಿಧ ವಯೋವರ್ಗದ ಕ್ರಿಕೆಟ್‌ ಟೂರ್ನಿಯಲ್ಲಿ ಈ ಹಿಂದೆಯೂ ಶತಕಗಳ ಮೂಲಕ ಹಲವು ಬಾರಿ ಸುದ್ದಿಯಾಗಿದ್ದ 14 ವರ್ಷದ ಯುವ ಪ್ರತಿಭೆ ಸಮಿತ್‌ ದ್ರಾವಿಡ್‌ ಈ ಬಾರಿ ಭರ್ಜರಿ ದ್ವಿಶತಕದೊಂದಿಗೆ ಸದ್ದು ಮಾಡಿದ್ದಾರೆ. ಈ ಮೂಲಕ ತಂದೆಯಂತೆ ಮಗ ಎಂಬ ಮಾತನ್ನು ಸಾಬೀತು ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್‌ ಜಗತ್ತಿನಲ್ಲಿ ತಂದೆ ರಾಹುಲ್‌ ನಡೆದು ಬಂದ ಹಾದಿಯಲ್ಲಿ ಪುತ್ರ ಸಮಿತ್‌ ಕೂಡ ದಿಟ್ಟ ಹೆಜ್ಜೆಇಡುತ್ತಿದ್ದಾನೆ.

ಅಂಡರ್‌ 14 ಕೆಎಸ್‌ಸಿಎ ಅಂತರವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಧಾರವಾಡ ವಲಯ ವಿರುದ್ಧದ ಪಂದ್ಯದಲ್ಲಿ ಸಮಿತ್‌, ಮೊದಲ ಇನ್ನಿಂಗ್ಸಲ್ಲಿ 250 ಎಸೆತಗಳಲ್ಲಿ 201 ಮತ್ತು ದ್ವಿತೀಯ ಇನ್ನಿಂಗ್ಸಲ್ಲಿ ಅಜೇಯ 94 ರನ್‌ಗಳಿಸಿದರು. ಅಲ್ಲದೇ 26 ರನ್‌ಗಳಿಗೆ 3 ವಿಕೆಟ್‌ ಪಡೆಯುವ ಮೂಲಕ ಆಲ್ರೌಂಡರ್‌ ಪ್ರದರ್ಶನ ತೋರಿದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ಬಲಗೈ ಬ್ಯಾಟ್ಸ್ ಮನ್ 14 ವರ್ಷದ ಸಮಿತ್ ಮೊದಲ ಇನ್ನಿಂಗ್ಸ್ನಲ್ಲಿ 250 ಎಸೆತಗಳಲ್ಲಿ 22 ಬೌಂಡರಿಗಳನ್ನು ಚಚ್ಚಿದ್ದಾರೆ. ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲೂ ಗಮನ ಸೆಳೆಯುತ್ತಿರುವ ಸಮಿತ್‌ ಧಾರವಾಡ ವಲಯದ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ 26 ರನ್‌ ನೀಡಿ 3 ವಿಕೆಟ್‌ ಕೂಡ ಕಬಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top