fbpx
ಸಮಾಚಾರ

“ಮಾಂಸಾಹಾರ ಹೋಟೆಲ್ ಮಾಡಿ ಸೋನಿಯಾ ಗಾಂಧಿ ಹೆಸರಿಡಿ”- ಇಂದಿರಾ ಕ್ಯಾಂಟೀನ್ ಮುಚ್ಚಲು ಸಿಎಂಗೆ ಸಿ.ಟಿ. ರವಿ ಮನವಿ!

ಇಂದಿರಾ ಕ್ಯಾಂಟೀನ್​ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಕ್ಯಾಂಟೀನ್​ನಲ್ಲಿ ಸಾಕಷ್ಟು ಅವ್ಯವಹಾರ ನಡಿಯುತ್ತಿದೆ. ಈ ಹಿನ್ನೆಲೆ ಕ್ಯಾಂಟೀನ್​ ಮುಚ್ಚಲು ಮುಂದಾಗಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ತಿಳಿಸಿದರು

ಇಂದಿರಾ ಕ್ಯಾಂಟೀನಿಗೆ ಕಾಂಗ್ರೆಸ್ ದುಡ್ಡು ಕೊಡುವುದಾದರೆ ಅದಕ್ಕೆ ನೆಹರೂ ಹೆಸರು ಇಡಲಿ, ರಾಜೀವ್ ಹೆಸರು ಇಡಲಿ ಅಥವಾ ಮಾಂಸಾಹಾರ ಆರಂಭಿಸಿ ಸೋನಿಯಾ ಹೆಸರನ್ನೂ ಇಡಲಿ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಹಣ ಈ ಮೂಲಕ ಬಡವರ ಹೊಟ್ಟೆ ತುಂಬಿಸುವ ಮೂಲಕ ಪಾಪ ಒಂದಿಷ್ಟು ಕಡಿಮೆಯಾಗಲಿ, ಆದರೆ ಸರ್ಕಾರದ ದುಡ್ಡಿನಲ್ಲಿ ಇನ್ನು ಮುಂದೆ ಹಣ ನುಂಗುವ ಯೋಜನೆಯನ್ನು ಅದೇ ಹೆಸರಲ್ಲಿ ಮುಂದುದುವರಿಸುವುದು ಸರಿಯಲ್ಲ, ಈ ಯೋಜನೆಗೆ ಅನ್ನಪೂರ್ಣೇಶ್ವರಿಯ ಹೆಸರು ಇಡಬಹುದು ಎಂದರು.

‘ದುಡ್ಡು ಹೊಡೆಯಲು ಮಾಡಿದ ಸಂಚಿನ ಫಲವೇ ಇಂದಿರಾ ಕ್ಯಾಂಟೀನ್‌. ಅದರ ಹೆಸರಲ್ಲಿ ಸರ್ಕಾರದ ದುಡ್ಡನ್ನು ಪೋಲು ಮಾಡಲು ಬಿಡುವುದಿಲ್ಲ. ಅದಕ್ಕಾಗಿ ಇದನ್ನು ಮುಚ್ಚುವುದೇ ಒಳಿತು.. ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭಾರಿ ಪ್ರಮಾಣದಲ್ಲಿ ದರಪಟ್ಟಿ ಹೆಚ್ಚಿಸಿ ₹ 1 ಕೋಟಿ ವೆಚ್ಚವನ್ನು ತೋರಿಸಿದ್ದಾರೆ. ಇಲ್ಲೇನು ಬೆಳ್ಳಿ ಇಟ್ಟಿಗೆ ಇಟ್ಟಿದ್ದಾರೆಯೇ? 20 ಜನರಿಗೆ ಊಟ ಸಿದ್ಧಪಡಿಸಿ, 200 ಊಟದ ಬಿಲ್‌ ಮಾಡುತ್ತಿದ್ದಾರೆ.

ಯಾವ ಬೀಗರಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿದೆ. ಅಕ್ರಮಗಳ ತನಿಖೆ ನಡೆದು ಕೊಳ್ಳೆ ಹೊಡೆದವರ ನಿಜ ಬಣ್ಣ ಶೀಘ್ರ ಬಯಲಿಗೆ ಬರಲಿದೆ. ಸರ್ಕಾರದ ಹಣದಲ್ಲಿ ಕ್ಯಾಂಟೀನ್​ ಮುಂದುವರೆಸುವುದು ಬೇಡ. ಒಂದು ವೇಳೆ ಮುಂದುವರೆಸಿದರೆ ಹೆಸರು ಬದಲಾವಣೆ ಮಾಡಲಿ ಎಂದು ಮನವಿ ಮಾಡುತ್ತೇನೆ” ಎಂದು ಸಿಟಿ ರವಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top