fbpx
ಸಮಾಚಾರ

ಗಲಭೆ ಸಂದರ್ಭದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತವೇ ನಂಬರ್ 01

2014ರಿಂದ ಇಲ್ಲಿ ತನಕದ ಅಂಶ ಗಮನಿಸಿದರೆ ಇಂಟರ್‌ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತವೇ ನಂಬರ್ ಒನ್. ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಇಂಟರ್ನೆಟ್ ಸ್ಥಗಿತ ಮಾಡಿದ ಸಂದರ್ಭಗಳು ಅಧಿಕವಾಗಿದೆ.

ವಿವಾದಾತ್ಮಕ ಹೊಸ ಪೌರತ್ವ ತಿದ್ದುಪಡಿ ಮಸೂದೆಯ ಮೇಲಿನ ಪ್ರತಿಭಟನೆಯನ್ನು ನಿಯಂತ್ರಿಸಲು ಭಾರತ ಇತ್ತೀಚೆಗೆ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಇದರರ್ಥ ತುರ್ತು ಪರಿಸ್ಥಿತಿಯಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದು ಸಾರ್ವಭೌಮ ರಾಷ್ಟ್ರಗಳಿಗೆ ಪ್ರಮಾಣಿತ ಅಭ್ಯಾಸವಾಗಿರಬೇಕು” ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

ಇತ್ತೀಚಿನ ದಿನಗಳಲ್ಲಿ, ಇಡೀ ಜಗತ್ತಿನಲ್ಲಿ ಗರಿಷ್ಠ ಸಂಖ್ಯೆಯ ಇಂಟರ್ನೆಟ್ ಅಡೆತಡೆಗಳನ್ನು ಕಂಡ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ವಾಸ್ತವದಲ್ಲಿ ಪಾಕಿಸ್ತಾನ, ಇರಾಕ್, ಸಿರಿಯಾ, ಟರ್ಕಿ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳಿಗಿಂತ ಭಾರತದಲ್ಲಿ ಹೆಚ್ಚಿನ ಬಾರಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

2014ರಿಂದ ಐದು ವರ್ಷದಲ್ಲಿ ದೇಶದಲ್ಲಿ ಬರೋಬ್ಬರಿ 357ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ವರ್ಷ ಇಲ್ಲಿ ತನಕ 95 ಬಾರಿ ಇಂಟರ್ನೆಟ್ ಬಂದ್ ಮಾಡಲಾಗಿದೆ ಎಂದು ಬಿಬಿಸಿ ಹೇಳಿದೆ. ಅತಿ ಹೆಚ್ಚು ಬಾರಿ ಇಂಟರ್‌ನೆಟ್ ಸ್ಥಗಿತಗೊಂಡಿರುವುದು ಕಾಶ್ಮೀರದಲ್ಲಿ. 169 ಬಾರಿ ಇಲ್ಲಿ ಶಟ್ ಡೌನ್ ಆಗಿದ್ದು, ನಂತರದಲ್ಲಿ ಪಶ್ಚಿಮ ಬಂಗಾಳದಲ್ಲಿ 99 ದಿನಗಳು, ರಾಜಸ್ತಾನ 67 ಬಾರಿ ಹಾಗೂ ಉತ್ತರ ಪ್ರದೇಶದಲ್ಲಿ 17 ಬಾರಿ ಸ್ಥಗಿತಗೊಂಡಿದೆ.

ಭಾರತ ಸರ್ಕಾರ ಇಂಟರ್ನೆಟ್‌ ಸ್ಥಗಿತಗೊಳಿಸುವ ಕ್ರಮವನ್ನು ಪದೇಪದೇ ಅನುಸರಿಸುತ್ತಿದ್ದು, ಜಗತ್ತಿನ ಇಂಟರ್ನೆಟ್‌ ಶಟ್‌ಡೌನ್‌ ರಾಜಧಾನಿ ಎಂದು ಜಾಗತಿಕ ಟೀಕೆಗೆ ಗುರಿಯಾಗುತ್ತಿದೆ. ಕಳೆದ ಆರು ತಿಂಗಳುಗಳಿಂದ ಭಾರತ ಸರ್ಕಾರ ಅನುಸರಿಸುತ್ತಿರುವ ಈ ವಿಧಾನವನ್ನು ಜಾಗತಿಕ ಪತ್ರಿಕೆಗಳು ಟೀಕಿಸಿದ್ದು, ಸರ್ವಾಧಿಕಾರಿ ಹಾದಿಯನ್ನು ತುಳಿಯುತ್ತಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top