fbpx
ಸಮಾಚಾರ

ಸಂಚಲನ ಸೃಷ್ಟಿಸಿದ ರಾಬರ್ಟ್ ಫರ್ಸ್ಟ್ ಲುಕ್ ಪೋಸ್ಟರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಕ್ರಿಸ್‍ಮಸ್ ಹಬ್ಬದ ದಿನವಾದ ಇಂದು ಬಿಡುಗಡೆಯಾಗಿದೆ. ನಟ ದರ್ಶನ್ ಈ ಪೋಸ್ಟರ್ ಅನ್ನು ಡಿ ಬಾಸ್ ತನ್ನ ಟ್ವಿಟ್ಟರ್ ನಲ್ಲಿ ಸಹ ಹಂಚಿಕೊಂಡಿದ್ದಾರೆ.

ರಿಲೀಸ್ ಆಗಿರುವ ಮೋಷನ್ ಪೋಸ್ಟರ್ 1 ನಿಮಿಷ 17 ಸೆಕೆಂಡ್‍ಗಳಿದ್ದು, ದರ್ಶನ್ ಖಡಕ್ ಆದ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬ್ಲಾಕ್ ಬಣ್ಣದಿಂದ ಮೂಡಿ ಬಂದಿದ್ದು, ಕಪ್ಪು ಬಣ್ಣದ ಜಾಕೆಟ್, ಕತ್ತಿನಲ್ಲಿ ಶಿಲುಬೆಯ ಚೈನ್, ಗಡ್ಡಧಾರಿಯಾಗಿ ಕೈಯಲ್ಲಿ ಗನ್ ಹಿಡಿದುಕೊಂಡು ದರ್ಶನ್ ರಗಡ್ ಪೋಸ್ ಕೊಟ್ಟಿದ್ದಾರೆ. ಪೋಸ್ಟರಿನಲ್ಲಿ ಲಾಂಗ್ ಹೇರಿನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 2 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 43ಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಅಲ್ಲದೇ ಅಭಿಮಾನಿಗಳು ದರ್ಶನ್ ಅವರ ಹೊಸ ಅವತಾರಕ್ಕೆ ಫಿದಾ ಆಗಿದ್ದು, ಪೋಸ್ಟರ್‌ಗೆ ಮೆಚ್ಚುಗೆಯ ಸುರಿಮಳೆ ಹರಿದು ಬರುತ್ತಿದೆ.

ರಾಬರ್ಟ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಪ್ರಸ್ತುತ ರಾಬರ್ಟ್ ಚಿತ್ರತಂಡ ವಾರಣಾಸಿಯಲ್ಲಿ ಚಿತ್ರಿಕರಣ ಮಾಡುತ್ತಿದೆ. ಜನವರಿಯಲ್ಲಿ ಚಿತ್ರಿಕರಣ ಪೂರ್ಣವಾಗಲಿದೆ ಎನ್ನಲಾಗಿದೆ. ದರ್ಶನ್‌ಗೆ ನಾಯಕಿಯಾಗಿ ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಟಿಸಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ಚಂದನವನದ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top