fbpx
ಸಮಾಚಾರ

ಪ್ರಧಾನಿ ಮೋದಿಗಾಗಿ ದೇವಸ್ಥಾನವನ್ನೇ ಕಟ್ಟಿದ ತಮಿಳುನಾಡು ರೈತ

ಪ್ರಧಾನಿ ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಮಾನಿಯಾಗಿರುವ ತಮಿಳುನಾಡು ರೈತನೋರ್ವ ಬಹಳ ವಿಭಿನ್ನವಾಗಿ ತನ್ನ ಪ್ರೇಮವನ್ನು ಮೆರೆದಿದ್ದಾನೆ. ತಿರುಚಿರಾಪಲ್ಲಿಯಲ್ಲಿ ಮೋದಿಗಾಗಿ ದೇವಾಲಯವನ್ನು ಕಟ್ಟಿಸಿದ್ದಾನೆ. ಎರಾಕ್ಕುಡಿ ಎಂಬ ಗ್ರಾಮದಲ್ಲಿ ಮೋದಿ ದೇವಾಲಯ ನಿರ್ಮಾಣವಾಗಿದ್ದು, 50 ವರ್ಷ ವಯಸ್ಸಿನ ಪಿ.ಶಂಕರ್ ಎಂಬ ರೈತ ಈ ದೇವಾಲಯ ನಿರ್ಮಿಸಿದ್ದಾನೆ.

ಈ ಗುಡಿ 8 ಚದರ ಅಡಿ ವಿಸ್ತೀರ್ಣ ಇದ್ದು, ಗುಡಿಯಲ್ಲಿರುವ ಮೋದಿ ಪ್ರತಿಮೆಗೆ ಅವರು ಪ್ರತೀನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿಅವರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಕಲ್ಯಾಣ ಯೋಜನೆಯಿಂದ ಪ್ರಭಾವಿತಗೊಂಡು ಗುಂಡಿಯನ್ನು ನಿರ್ಮಿಸಿದ್ದೇನೆ. ಈ ಗುಡಿ ನಿರ್ಮಾಣಕ್ಕೆ ರೂ.1.2 ಲಕ್ಷ ವೆಚ್ಚವಾಗಿದೆ ಎಂದು ಶಂಕರ್ ತಿಳಿಸಿದ್ದಾರೆ.

ಅಯ್ಯ (ಮೋದಿ) ಅವರಿಗಾಗಿ ದೇಗುಲ ನಿರ್ಮಾಣ ಮಾಡಲು 8 ತಿಂಗಳ ಹಿಂದೆಯೇ ಆಲೋಚನೆ ನಡೆಸಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ವಾರಗಳ ಹಿಂದೆ ದೇಗುಲ ಉದ್ಘಾಟನೆ ಮಾಡಲಾಯಿತು ಎಂದಿದ್ದಾರೆ.

ರೈತ ಶಂಕರ್ ಹೇಳುವಂತೆ, ‘ನಾನು ಪ್ರಧಾನಿ ಮೋದಿ ಅವರ ಕಾರ್ಯಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಅವರ ಯೋಜನೆಗಳ ಫಲಾನುಭವಿಯೂ ಆಗಿದ್ದೇನೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ನನಗೆ ಹಲವು ಉಪಯೋಗ ಆಗಿವೆ’ ಎಂದು ಅವರು ಹೇಳಿದ್ದಾರೆ.

ಸಣ್ಣ 8*8 ಕೊಠಡಿಯನ್ನು ನಿರ್ಮಿಸಿ ಮಧ್ಯದಲ್ಲಿ ಮೋದಿ ಮುರ್ತಿಯನ್ನು ಇಡಲಾಗಿದೆ. ಅದೇ ಕೊಠಡಿಯಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ, ಹಾಲಿ ಸಿಎಂ ಪಳನಿಸ್ವಾಮಿ, ಗೃಹ ಮಂತ್ರಿ ಅಮಿತ್ ಶಾ ಚಿತ್ರಗಳನ್ನೂ ಇಡಲಾಗಿದೆ. ಈ ದೇವಾಲಯ ಕಟ್ಟಲು ಶಂಕರ್‌ ಗೆ 1.2 ಲಕ್ಷ ಖರ್ಚಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top