fbpx
ಸಮಾಚಾರ

ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿರುವ ಉದ್ದನೆಯ ಸುರಂಗಕ್ಕೆ ವಾಜಪೇಯಿ ಹೆಸರು ಮರುನಾಮಕರಣ!

ಹಿಮಾಚಲ ಪ್ರದೇಶದ ರೋಹ್ಟಂಗ್‌ ಪಾಸ್‌ನ ಕೆಳ ಭಾಗದಲ್ಲಿ ನಿರ್ಮಿಸಿರುವ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ ಸುರಂಗಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. ಅಟಲ್‌ರ 95ನೇ ಜನ್ಮದಿನಾಚರಣೆಯ ಅಂಗವಾಗಿ ಬುಧವಾರ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ.

2000ರ ಜೂನ್‌ 3ರಂದು ವಾಜಪೇಯಿ ಪ್ರಧಾನಿಯಾಗಿದ್ದಾಗ 8.8 ಕಿ.ಮೀ. ಉದ್ದದ ಐತಿಹಾಸಿಕ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈ ಬೃಹತ್‌ ಯೋಜನೆಯಿಂದ ಮನಾಲಿ ಹಾಗೂ ಲೇಹ್‌ ಪ್ರದೇಶಕ್ಕೆ ತೆರಳಲು 46 ಕಿ.ಮೀ. ಸುತ್ತುವುದು ತಗ್ಗಲಿದೆ.

ಈ ಸುರಂಗ ಮಾರ್ಗ ನಿರ್ಮಾಣವಾದ ಕಾರಣ ಮನಾಲಿ ಮತ್ತು ಲೇಹ್ ನಡುವಿನ ದೂರ 46 ಕಿ.ಮೀ. ಇಳಿಕೆಯಾಗಿದ್ದು, ಸಾರಿಗೆ ವೆಚ್ಚ ಕೋಟ್ಯಂತರ ರೂಪಾಯಿ ಕಡಿಮೆ ಆಗಿದೆ. ಬಾರ್ಡರ್ ರೋಡ್ ಆರ್ಗನೈಸೇಷನ್​ ಇದನ್ನು ನಿರ್ಮಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸುರಂಗ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ನಿರ್ಧರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top