fbpx
ಸಮಾಚಾರ

“ದೇಶ ಒಡೆಯುವ ತುಕ್ಡೆ, ತುಕ್ಡೆ ಗ್ಯಾಂಗ್​ಗೆ ಪಾಠ ಕಲಿಸಲು ಇದು ಸೂಕ್ತ ಸಮಯ” ಅಮಿತ್​ ಷಾ ವಾಗ್ದಾಳಿ!

ಪೌರತ್ವ ತಿದ್ದುಪಡಿ ಕಾಯಿದೆ ವಿಷಯದಲ್ಲಿ ಪ್ರತಿಭಟನೆ, ಪ್ರತಿರೋಧ ಮತ್ತು ಹಿಂಸಾಚಾರದ ಅಬ್ಬರ ಈಗ ತಣ್ಣಗಾಗಿದೆ. ಆದರೆ ವಾದ-ಪ್ರತಿಪಾದ, ಏಟು-ಎದಿರೇಟಿನ ಭರಾಟೆ ಜೋರಾಗಿದೆ. ನೂತನ ಕಾಯಿದೆ ವಿಷಯದಲ್ಲಿಬಿಜೆಪಿ ಮತ್ತು ಪ್ರತಿಪಕ್ಷಗಳ ಮುಖಂಡರು ಗುರುವಾರ ತಮ್ಮದೇ ಧಾಟಿಯಲ್ಲಿ ಸಮರ್ಥನೆ ಮತ್ತು ದೂಷಣೆಯ ಜಂಗಿಕುಸ್ತಿ ನಡೆಸಿ ಗಮನ ಸೆಳೆದರು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ವದಂತಿ ಹರಡಿಸಿದ ಪ್ರತಿಪಕ್ಷಗಳನ್ನು ತರಾಟೆಗೆ ತೆದುಕೊಂಡರು. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ ಪ್ರತಿಪಕ್ಷಗಳೇ ಕಾರಣವೆಂದು ಆಕ್ರೋಶ ಹೊರಹಾಕಿದರು.

ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮೇಲೆ ಚರ್ಚೆ ನಡೆಯಿತು. ಈ ವೇಳೆ ಯಾವುದೇ ಪ್ರತಿಪಕ್ಷದ ನಾಯಕರು ಚಕಾರ ಎತ್ತಲಿಲ್ಲ. ಯಾವಾಗ ಅವರೆಲ್ಲ ಸಂಸತ್ತಿನಿಂದ ಹೊರಬಂದರೋ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ಪ್ರಾರಂಭಿಸಿದರು ಎಂದು ಆರೋಪಿಸಿದರು.

“ಮುಂದಿನ ವರ್ಷ ದೆಹಲಿಯ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದ್ದು ಇಲ್ಲಿರುವ ತುಕ್ಡೆ ತುಕ್ಡೆ ಗ್ಯಾಂಗ್ ಅನ್ನು ನಿರ್ಣಾಮ ಮಾಡುವ ಸಮಯ ಬಂದಿದೆ. ನಾನೊಂದನ್ನು ಹೇಳಲು ಬಯಸುತ್ತೇನೆ. ಕಾಂಗ್ರೆಸ್​ ನೇತೃತ್ವದ ತುಕಡೆ ತುಕಡೆ ಗ್ಯಾಂಗ್​ ಶಿಕ್ಷಿಸಲು ಇದ ಸರಿಯಾದ ಸಮಯವಾಗಿದೆ. ನಗರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಅವರೇ ಕಾರಣ.” ಎಂದು ದೆಹಲಿ ಡೆವಲಪ್ ಮೆಂಟ್ ಅಥಾರಿಟಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಮಿತ್ ಶಾ ಗುಡುಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top