fbpx
ಸಮಾಚಾರ

ಮೂಡುಬಿದಿರೆಯ ಸಾವಿರಕಂಬದ ಬಸದಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮ!

ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ ಇವರ ಮಾರ್ಗ ದರ್ಶನ, ಶುಭಾಶಿರ್ ವಾದ ಹಾಗೂ ಕ್ಷುಲ್ಲಕ ಧ್ಯಾನ ಸಾಗರ್ ರ ಉಪಸ್ಥಿತಿಯಲ್ಲಿ ಸಾವಿರ ಕಂಬದ ಬಸದಿ ಲಕ್ಷ ದೀಪ ಮಹೋತ್ಸವ ಭಗವಾನ್ 1008 ಚಂದ್ರ ಪ್ರಭ ಸ್ವಾಮಿಗೆ ವಿಶೇಷ ಅಭಿಷೇಕದೊಂದಿಗೆ ಅತ್ಯಂತ ಶ್ರದ್ದಾ ಭಕ್ತಿಯಿಂದ ಸಂಪನ್ನ ಗೊಂಡಿತು.

 

 

ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಶ್ರೀ ಗಳವರು ತಮ್ಮ ಆಶೀರ್ವಾಚ ನ ದಲ್ಲಿ ಧನುರ್ಮಾಸ ದಲ್ಲಿ ಒಂದು ತಿಂಗಳು ಮೂಡುಬಿದಿರೆ ಬಸದಿಗಳ ಗಡಿ ಬಸದಿಗಳ ಮಹಾ ನೈವೇದ್ಯ ಪೂಜೆ ಸಂಪ್ರದಾಯದಂತೆ ನೇರವೇರಿಸಲಾಗುತ್ತಿದೆ ಹಾಗೂ ದೀಪೋತ್ಸವದ ಮೂಲಕ ಮನದಲ್ಲಿ ಅಡಗಿದ ಕತ್ತಲನ್ನು ಸರಿಸಿ ಜ್ಞಾನ ಜ್ಯೋತಿ ಬೆಳಗಿ ನೆಮ್ಮದಿಯ ಜೀವನಕ್ಕಾಗಿ ಸರ್ವರೂ ಪ್ರಾರ್ಥಿಸೋಣ ಎಂದು ನುಡಿದರು.

ಇದೆ ಸಂದರ್ಭದಲ್ಲಿ ಭಗವಾನ್ 1008 ಚಂದ್ರಪ್ರಭ ಸ್ವಾಮಿಗೆ ಸುಮಾರು 2ಕಿಲೊ ಬೆಳ್ಳಿಯಿಂದ ನಿರ್ಮಿಸಿದ ಮುಕ್ಕೊಡೆಯನ್ನು ಶ್ರೀ ಮಠದಿಂದ ಮೆರವಣಿಗೆಯಲ್ಲಿ ತಂದು ಸಾವಿರ ಕಂಬದ ಬಸದಿಗಾಗಿ ಉಜಿರೆಯ ಶ್ರೀ ನಾಬಿ ರಾಜ್ ಶ್ರೀ ಮತಿ ಜಯಮಾಲಾ ಮಕ್ಕಳು ಹರಕೆಯ ರೂಪದಲ್ಲಿ ಒಪ್ಪಿಸಿದರು.

 

 

ಸಾoಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ವತಿಯಿಂದ ಯುವ ಪ್ರತಿಭೆ ದೀಪಾನ್ಸಿ ಪ್ರದೀಪ್ ಜೈನ್ ಬೆoಗಳೂರು ಇವರ ಭರತ ನಾಟ್ಯ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಕೊನೆಗೆ ಮೂಡುಬಿದಿರೆ ಶ್ರೀ ಶ್ರೀ ಗಳವರು ಮುಕ್ಕೋಡ್ ಒಪ್ಪಿಸಿ ನಾ ಬಿ ರಾಜ್ ಪೋವಣಿ ಜಯ ಮಾಲಾ ದಂಪತಿಗಳನ್ನು ನೃತ್ಯ ಶಿಕ್ಷಕಿ ತನುಜಾ ಭರತ ನಾಟ್ಯ ಯುವ ಪ್ರತಿಭೆ ದೀಪಾನ್ಸಿ ಪ್ರದೀಪ್ ಜೈನ್ ರನ್ನು ಶ್ರೀ ಮಠ ದ ಕಡೆಯಿಂದ ಸ್ವಸ್ತಿಶ್ರೀ ಚಾರುಕೀರ್ತಿ ಮಹಾ ಸ್ವಾಮೀಜಿ ಅಭಿನಂದಿಸಿ ಹರಸಿ ಆಶೀರ್ವದಿಸಿದರು.

ಶ್ರೀ ನೇಮಿರಾಜ್ ಸ್ವಸ್ತಿಶ್ರೀ ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ದೀಪಿಕಾ ರೈ, ಶ್ರೀ ತನುಜಾ ಸಹಕರಿಸಿದರು. ಪಟ್ನ ಶೆಟ್ಟಿ ಸುದೇಶ್ ಕುಮಾರ್ ದಿನೇಶ್ ಬೆಟ್ಕೇರಿ ಮುಕ್ತೇಸರರು ಗುಣಪಾಲ ಹೆಗ್ಡೆ ಡಾ ಮಹಾವೀರ್ ಆಯುಷ್ ಅಭಯಚಂದ್ರ ಜೈನ್,ಶ್ರೀಮತಿ ವಿಜಯ ಲಕ್ಷ್ಮಿ ಆರಿಗ, ಜಯ ರಾಜ್ ಕಂಬ್ಳಿ, ಯುವ ರಾಜ್ ಜೈನ್ ಬಾಹುಬಲಿ ಪ್ರಸಾದ್, ಶಂಭವ್ ಕುಮಾರ್, ಪ್ರೇಮ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು ಬಳಿಕ ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪಾರಾಧನೆ ಜರುಗಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top