fbpx
ಸಮಾಚಾರ

ಎಣ್ಣೆ ಏಟಲ್ಲಿ ನಿರ್ಮಾಪಕಿ ಮೇಲೆ ನಟಿ ಸಂಜನಾ ಗಲ್ರಾನಿ ಹಲ್ಲೆ? ನಟಿ ವಿರುದ್ಧ ದೂರು ದಾಖಲು!

ಕಳೆದ ಕೆಲವು ದಿನಗಳಿಂದ ಯಾವುದೇ ವಿವಾದಗಳಿಲ್ಲದೆ ತಣ್ಣಗಿದ್ದ ಸ್ಯಾಂಡಲ್ ವುಡ್ ನಲ್ಲಿ ಇದೀಗ ಹೊಸ ವಿವಾದ ತಲೆ ಎತ್ತಿದೆ. ಹಲವು ವಿವಾದಗಳಿಂದ ಸದ್ದು ಮಾಡಿರುವ ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ವಿರುದ್ಧ ಈಗ ಹೊಸ ಆರೋಪ ಕೇಳಿ ಬಂದಿದೆ. ಬಾರ್ ವೊಂದರಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಸಂಜನಾ ವಿರುದ್ಧ ಬಾಲಿವುಡ್ ನಿರ್ಮಾಪಕಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಂಗಳೂರಿನ ಸ್ಟಾರ್ ಹೋಟೆಲ್‍ನಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮಧ್ಯೆ ಜಗಳವಾಗಿದ್ದು, ಗಲಾಟೆ ತಾರಕಕ್ಕೇರಿ ಸಂಜನಾ ನಿರ್ಮಾಪಕಿ ಮೇಲೆ ಗ್ಲಾಸ್ ನಿಂದ ಹೊಡೆದಿದ್ದಾರೆ. ಈ ಸಂಬಂಧ ನಿರ್ಮಾಪಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಪಬ್ ವೊಂದರಲ್ಲಿ ಡಿಸೆಂಬರ್ 24ರಂದು ಒಂದೇ ಟೇಬಲ್ ನಲ್ಲಿ ಸಂಜನಾ ಹಾಗೂ ನಿರ್ಮಾಪಕಿ ವಂದನಾ ಜೈನ್ ಪಾರ್ಟಿ ಮಾಡುತ್ತಿದ್ದರು. ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿನ ಚಕಮಿಕಿ ವಿಕೋಪಕ್ಕೆ ತಿರುಗಿದಾಗ ಸಂಜನಾ ಅವರು ವಿಸ್ಕಿ ಗ್ಲಾಸ್ ತೆಗೆದುಕೊಂಡು ವಂದನಾ ಮೂಗಿಗೆ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.

ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡರು. ಪಾರ್ಟಿ ನಡೆಯುವ ಸಂದರ್ಭದಲ್ಲಿ ಗಲಾಟೆಯಾಗಿದೆ ಎಂದು ಡಿಸಿಪಿ ಚೇತನ್ ಧೃಡಪಡಿಸಿದ್ದಾರೆ. ಜೊತೆಗೆ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ವಂದನಾ ಜೈನ್ ಮತ್ತು ಸಂಜನಾಗೆ ಸೂಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸರು ಎನ್​ಸಿಆರ್​ ದಾಖಲು ಮಾಡಿಕೊಂಡಿದ್ದಾರೆ.

ಸಂಜನಾ ಸ್ಪಷ್ಟನೆ:
ಈ ರೀತಿ ದೂರು ದಾಖಲಾಗಿಯೇ ಇಲ್ಲ ಎಂದು ಸಂಜನಾ ಹೇಳುತ್ತಾರೆ. “ನಾನು ಮತ್ತು ದೂರು ನೀಡಿದವರು ಇಬ್ಬರೂ ಗೆಳತಿಯರು. ಗೆಳತಿಯರು ಎಂದಾಗ ಒಂದು ಮಾತು ಬರುತ್ತೆ ಹೋಗುತ್ತೆ. ನಮ್ಮ ನಡುವೆಯೂ ಹೀಗೆಯೇ ಆಗಿದೆ ಅಷ್ಟೆ. ಇದಕ್ಕೆ ಮಸಾಲೆ ಸೇರಿಸುವ ಅಗತ್ಯವಿಲ್ಲ. ನಾನು ನಮ್ಮ ಮನೆಯಲ್ಲಿ ಆರಾಮಾಗಿದ್ದೇನೆ. ಅವರು ಕೂಡ ಅವರ ಮನೆಯಲ್ಲಿ ಹಾಯಾಗಿದ್ದಾರೆ. ಗಲಾಟೆ ದೃಶ್ಯ ನನ್ನ ಅಣ್ಣನ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದೆ. ಅಗತ್ಯವಿದ್ದರೆ ನಾನು ವಿಡಿಯೋ ನೀಡುತ್ತೇನೆ,” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top