fbpx
ಸಮಾಚಾರ

ಅಭಿಮಾನಿಗಳಿಗೆ ವಿಶೇಷ ಸಂದೇಶದ ಜೊತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ನಟ ದರ್ಶನ್!

2020 ಹೊಸ ವರ್ಷಕ್ಕೆ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸಿದ್ದಾರೆ. ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ, ಕನಸುಗಳು ಸಾಕಾರಗೊಳ್ಳಲಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ,

 

 

“ಕಳೆದು ಹೋದ ಸಮಯ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲ. ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ. ನಿಮ್ಮ ಗುರಿ, ಅದಕ್ಕೆ ಬೇಕಾದ ಕಾರ್ಯ ನಿಷ್ಠೆ ಮೇಲೆ ನಂಬಿಕೆ ಇರಲಿ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ದಾಸ ದರ್ಶನ್” ಎಂದು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.

ಜೊತೆಗೆ ರಾಬರ್ಟ್ ಸಿನಿಮಾ ಫಸ್ಟ್ ಲುಕ್ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದಾರೆ. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಮೋಷನ್ ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top