fbpx
ಸಮಾಚಾರ

ಹೊಸ ವರ್ಷಕ್ಕೆ ಗೆಳತಿಯನ್ನು ಪರಿಚಯಿಸಿದ ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾ ಬ್ಯಾಡ್ ಬಾಯ್ ಹಾರ್ದಿಕ್ ಪಾಂಡ್ಯಾ ಹೊಸ ವರ್ಷದ ಆರಂಭದಲ್ಲೇ ಸುದ್ದಿಯಾಗಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸುವ ಸಂದರ್ಭದ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮುಚ್ಚಿಟ್ಟಿದ್ದ ಪ್ರೇಮಕಾವ್ಯವನ್ನು ಅಭಿಮಾನಿಗಳಿಗೆ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ನಟಿ ನತಾಶಾ ಸ್ಯಾಂಕೋವಿಕ್ ಜೊತೆಗಿನ ತಮ್ಮ ಪ್ರೇಮ ಸಂಬಂಧವನ್ನು ಖಚಿತಪಡಿಸಿದ್ದಾರೆ.

 

View this post on Instagram

Starting the year with my firework ❣️

A post shared by Hardik Pandya (@hardikpandya93) on

 

ಹಾರ್ದಿಕ್ ಪಾಂಡ್ಯ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಪ್ರೇಯಸಿಯೊಂದಿಗಿನ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ‘‘ನನ್ನ ಪಟಾಕಿಯೊಂದಿಗೆ ಹೊಸ ವರ್ಷವನ್ನು ಆರಂಭಿಸುತ್ತಿದ್ದೇನೆ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದರೊಂದಿಗೆ ನಟಿ ನತಾಶ ಸ್ಟ್ಯಾನ್ಕೊವಿಚ್ ಅವರೊಂದಿಗಿನ ಸಂಬಂಧವನ್ನು ಭಾರತ ತಂಡದ ಆಟಗಾರ ಸ್ಪಷ್ಟಪಡಿಸಿದ್ದಾರೆ.

ಹಲವು ದಿನಗಳ ಹಿಂದೆಯೇ ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಎಲ್ಲಾ ಸುದ್ದಿಗಳಿಗೂ ಹಾರ್ದಿಕ್ ಫುಲ್ ಸ್ಟಾಪ್ ಹಾಕಿದ್ದಾರೆ. ಹಾರ್ದಿಕ್‍ರ ಈ ಪೋಸ್ಟ್ ಗೆ ಅವರ ಕುಟುಂಬ ಸದಸ್ಯರು ಸೇರಿದಂತೆ ಟೀಂ ಇಂಡಿಯಾದ ಹಲವು ಕ್ರಿಕೆಟ್ ಆಟಗಾರರು ಲೈಕ್ ಮಾಡಿ ಕಾಮೆಂಟ್ ಮಾಡಿದ್ದಾರೆ.

ಸರ್ಬಿಯನ್ ಮೂಲದ ನಟಿ ನತಾಶಾ ಸ್ಯಾಂಕೋವಿಕ್ ಕನ್ನಡ ಚಿತ್ರಗಳಲ್ಲೂ ಮಿಂಚಿದ್ದಾರೆ. ಕನ್ನಡದ ‘ದನ ಕಾಯೋನು ‘ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಸಾ ಕಾಣಿಸಿಕೊಂಡಿದ್ದರು.ಡ್ಯಾನ್ಸ್ ಟಿವಿ ಶೋ ‘ನಾಚ್ ಬಲಿಯೆ’ ಸೀಸನ್ 9ರ ಮೂಲಕ ಜನಪ್ರಿಯತೆಯನ್ನು ನಟಿ ಸ್ಟ್ಯಾಂಕೋವಿಕ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಈ ಮೂಲಕ ಸಿನಿಲೋಕ ಹಾಗೂ ಕ್ರಿಕೆಟ್‌ಲೋಕದ ಮತ್ತೊಂದು ಜೋಡಿ ಪ್ರೇಮ ಬಂಧನದಲ್ಲಿ ಸಿಲುಕಿದಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top