fbpx
ಸಮಾಚಾರ

1 ಗಂಟೆ ಡ್ಯಾನ್ಸ್‌ಗೆ ಬರೋಬ್ಬರಿ 3 ಕೋಟಿ ರೂ ಪಡೆದ ಸ್ಯಾಂಡಲ್​ವುಡ್​ ನಟಿ

ಸ್ಯಾಂಡಲ್​ವುಡ್​ ‘ಐರಾವತ‘ ಸಿನಿಮಾದಲ್ಲಿ ಸೊಂಟ ಬಳುಕಿಸಿದ ನಟಿ ಊವರ್ಶಿ ರೌಟೇಲಾ ಕಾರ್ಯವೊಂದರಲ್ಲಿ ಒಂದು ಗಂಟೆ ನೃತ್ಯ ಮಾಡಲು ಬರೊಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

ಡಿಸೆಂಬರ್ 31ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು ಬಾಲಿವುಡ್ ಕಾರ್ನಿವಲ್ 2020 ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಊರ್ವಶಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ. ಸ್ಟಾರ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮುಂತಾದ ಕಲಾವಿದರು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಇಷ್ಟೊಂದು ಹಣವನ್ನು ಪಡೆದಿಲ್ಲ . ಆದರೆ ಊವರ್ಶಿ ಪಡೆದಿರುವ ಸಂಭಾವನೆ ಅವರೆಲ್ಲರನ್ನು ಮೀರಿಸಿದಂತಿದೆ.

3 ಕೋಟಿ ಸಂಭಾವನೆ ಪಡೆಯುವ ಮೂಲಕ ಊರ್ವಶಿ ಬೇರೆ ಕಲಾವಿದರ ದಾಖಲೆಯನ್ನೇ ಮುರಿದಿದ್ದಾರೆ. ಹೊಸ ವರ್ಷದ ಕಾರ್ಯಕ್ರಮದಲ್ಲಿ ಊರ್ವಶಿ, ‘ಡ್ಯಾಡಿ ಮಮ್ಮಿ’, ‘ಹಸಿನೋ ಕಾ ದೀವಾನಾ’ ಹಾಗೂ ತಾವು ನಟಿಸಿದ ‘ಪಾಗಲ್‍ಪಂತಿ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಮಾಡುವ ಮೊದಲು ಊರ್ವಶಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋ ಹಾಕುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top