fbpx
ಸಮಾಚಾರ

ಕುಟುಂಬಕ್ಕೆ ಹೇಳದೇ ನಿಶ್ಚಿತಾರ್ಥ ಮಾಡಿಕೊಂಡ್ರು ಹಾರ್ದಿಕ್​: ಸುದ್ದಿ ಕೇಳಿ ಪಾಂಡ್ಯಾ ತಂದೆಗೆ ಶಾಕ್​!

ಟೀಂ ಇಂಡಿಯಾ ಕ್ರಿಕೆಟರ್​ ಹಾರ್ದಿಕ್ ಪಾಂಡ್ಯಾ ಹೊಸವರ್ಷದಂದೇ ಗೆಳತಿ, ನಟಿ ನತಾಶಾ ಸ್ಟ್ಯಾಂಕೋವಿಕ್​ ​ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಯೋಗರಾಜ ಭಟ್​ ನಿರ್ದೇಶನದ ದನ ಕಾಯೋನು ಸಿನಿಮಾದಲ್ಲಿ ಅಭಿನಯ ಮಾಡಿದ್ದ ಬಾಲಿವುಡ್​ ನಟಿ ನತಾಶಾ ಹಾಗೂ ಹಾರ್ದಿಕ್​ ಪಾಂಡ್ಯಾ ನಿಶ್ಚಿತಾರ್ಥ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

ಹಾರ್ದಿಕ್​ ಪಾಂಡ್ಯಾ ಎಂಗೇಜ್​ಮೆಂಟ್​ ಬರೀ ಅಭಿಮಾನಿಗಳಿಗಷ್ಟೇ ಅಲ್ಲ ಅವರ ಕುಟುಂಬದವರಲ್ಲೂ ಅಚ್ಚರಿ ಮೂಡಿಸಿದೆ. ಹಾರ್ದಿಕ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಅವರ ತಂದೆಗೇ ಗೊತ್ತಿರಲಿಲ್ಲವಂತೆ! ‘ಪುತ್ರ ಹಾರ್ದಿಕ್​ ಪಾಂಡ್ಯ ಮತ್ತು ನತಾಶಾಳ ಎಂಗೇಜ್​ಮೆಂಟ್ ನಡೆದ ನಂತ್ರ ನಮಗೆ ವಿಷ್ಯ ಗೊತ್ತಾಯ್ತು. ​ಅವ್ರು ರಜೆ ಹಿನ್ನಲೆ ದುಬೈೆಗೆ ಹೋಗ್ತಾರೆ ಅಂತಾ ಗೊತ್ತಿತ್ತು. ಆದ್ರೆ ನಿಶ್ಚಿತಾರ್ಥ ಮಾಡಿಕೊಳ್ತಾರೆ ಅಂತಾ ಸುಳಿವು ಸಿಕ್ಕಿರಲಿಲ್ಲ.’” ಎಂದು ಪಾಂಡ್ಯ ತಂದೆ ಹಿಮಾಂಶು ಪಾಂಡ್ಯಾ ಹೇಳಿದ್ದಾರೆ.

‘ನತಾಶರನ್ನ ಹಲವು ಕಾರ್ಯಕ್ರಮಗಳಲ್ಲಿ ನಾವು ಭೇಟಿಯಾಗಿದ್ದೆವು. ಆಕೆ ಒಳ್ಳೆ ಹುಡುಗಿ. ಆದ್ರೆ ಇವರಿಬ್ಬರ ನಿಶ್ಚಿತಾರ್ಥ ನಮಗೆ ಆಶ್ಚರ್ಯ ಉಂಟುಮಾಡಿದೆ. ಈ ಬಗ್ಗೆ ಯಾವುದೇ ಸುಳಿವು ನಮಗೆ ಸಿಕ್ಕಿರಲಿಲ್ಲ‘ ಎಂದು ತಿಳಿಸಿದ್ದಾರೆ.

 

View this post on Instagram

Forever yes 🥰💍❤️ @hardikpandya93

A post shared by 🎀Nataša Stanković🎀 (@natasastankovic__) on

 

ಅಂದಹಾಗೆ ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಎಂಗೇಜ್‌ಮೆಂಟ್ ಬಹಿರಂಗ ಪಡಿಸಿದ್ದಾರೆ. ಈ ಜೋಡಿ ಈಗಾಗಲೇ ಹಲವು ಬಾರಿ ಜೊತಯಾಗಿ ಕಾಣಿಸಿಕೊಂಡಿತ್ತು. ಆದರೆ ಎಲ್ಲೂ ಕೂಡ ಪ್ರೀತಿ ಕುರಿತು ಹೇಳಿಕೊಂಡಿರಲಿಲ್ಲ. ಇದೀಗ ಎಂಗೇಜ್ಮೆಂಟ್ ಮೂಲಕ ಅಚ್ಚರಿ ನೀಡಿದ್ದಾರೆ. ಇದೀಗ ಅಭಿಮಾನಿಗಳು ಪಾಂಡ್ಯ ಹಾಗೂ ನತಾಶ ಮದುವೆ ಯಾವಾಗ ಅನ್ನೋ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top