fbpx
ಸಮಾಚಾರ

ಜನವರಿ 06: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಸೋಮವಾರ, ಜನವರಿ 06 2019
ಸೂರ್ಯೋದಯ : 6:43 am
ಸೂರ್ಯಾಸ್ತ: 6:07 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಪುಷ್ಯ
ಪಕ್ಷ : ಶುಕ್ಲಪಕ್ಷ
ತಿಥಿ : ಏಕಾದಶೀ 28:01
ನಕ್ಷತ್ರ:ಭರಣಿ 14:15
ಯೋಗ: ಸಾಧ್ಯ 23:38
ಕರಣ: ವಾಣಿಜ 15:39 ವಿಷ್ಟಿ 28:01

ಅಭಿಜಿತ್ ಮುಹುರ್ತ:12:02 pm – 12:47 pm
ಅಮೃತಕಾಲ : 9:06 am – 10:49 am

ರಾಹುಕಾಲ- 8:11 am – 9:36 am
ಯಮಗಂಡ ಕಾಲ- 11:00 am – 12:25 pm
ಗುಳಿಕ ಕಾಲ- 1:49 pm – 3:14 pm

 

 

ಮೇಷ (Mesha)

 

ಗ್ರಹಚಾರ ಕೆಟ್ಟಾಗ ಮನೆಮಂದಿಯೂ ಆದರಿಸುವುದಿಲ್ಲ. ಆದರೆ ಇಂದು ನಿಮಗೆ ಸ್ನೇಹಿತರು ಸಹಕಾರ ನೀಡುವರು. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಪರಮೇಶ್ವರನನ್ನು ಆರಾಧಿಸಿ

ವೃಷಭ (Vrushabh)


ವೈಯಕ್ತಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಔದಾರ್ಯವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಯತ್ನಿಸುವರು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಸಂಗ್ರಹ ಮಾಡುವಿರಿ.

ಮಿಥುನ (Mithuna)


ಕೆಲವರು ನಿಮ್ಮಿಂದ ಪ್ರಯತ್ನಪೂರ್ವಕವಾಗಿ ಅಂತರ ಕಾಪಾಡಿಕೊಳ್ಳಲು ಯತ್ನಿಸಬಹುದು. ಇದರ ಬಗ್ಗೆ ಯೋಚಿಸಬೇಡಿ. ನಿಮ್ಮ ಮುಂದಿನ ಗುರಿ ದೊಡ್ಡದಿದೆ. ಆ ಬಗ್ಗೆ ಗಮನ ನೀಡಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕರ್ಕ (Karka)


ನಿಮ್ಮ ಅದೃಷ್ಟವು ಇಂದು ನಿಮ್ಮನ್ನು ಹುಡುಕಿಕೊಂಡು ಬರುವುದು. ಇದರಿಂದ ಆತ್ಮಸ್ಥೈರ್ಯ ಹೆಚ್ಚಾಗುವುದು. ಕೆಲಸ ಕಾರ್ಯಗಳು ಸರಾಗವಾಗಿ ಆಗುವುದು. ಮಿತ್ರರ ಭೇಟಿ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ತರುವುದು.

ಸಿಂಹ (Simha)


ಬಾಳಸಂಗಾತಿ ಮತ್ತು ಮಕ್ಕಳು ನಿಮಗೆ ಸಂತೋಷದ ಸಮಾಚಾರ ತಿಳಿಸುವರು. ನಿಮ್ಮ ಜನಪ್ರಿಯತೆ ಹೆಚ್ಚಾಗುವುದು. ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಿಂದ ದೂರ ಇರುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕನ್ಯಾರಾಶಿ (Kanya)


ಬಾಕಿ ಇದ್ದ ಕೆಲಸ ಕಾರ್ಯಗಳು ಇಂದು ಮುಗಿಯುವುದು. ಇಂದು ಇಡೀ ದಿನ ನಿಮ್ಮ ಬೇಕು ಬೇಡಗಳ ತುಲನೆ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳಿರಿ. ಹಣವನ್ನು ಮಿತವಾಗಿ ಬಳಸಿರಿ. ಆರೋಗ್ಯ ಉತ್ತಮವಾಗಿರುವುದು.

ತುಲಾ (Tula)


ಸರಕು ಸಾಗಾಣಿಕೆ ವ್ಯವಹಾರಸ್ಥರಿಗೆ ಕಟ್ಟಡ ಕಟ್ಟುವ ಕೆಲಸಗಾರರಿಗೆ ಉತ್ತಮ ದಿನ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಬಾಕಿ ಬರಬೇಕಾಗಿದ್ದ ಹಣ ಇಂದು ನಿಮ್ಮ ಕೈ ಸೇರುವುದು.

ವೃಶ್ಚಿಕ (Vrushchika)


ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಕೊಂಚ ಗಮನ ಹರಿಸುವುದು ಒಳ್ಳೆಯದು. ಯಾರನ್ನು ಅತಿಯಾಗಿ ನಂಬದಿರಿ. ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಅಗತ್ಯ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಧನು ರಾಶಿ (Dhanu)


ಧನಾತ್ಮಕ ಚಿಂತನೆಯು ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ತಂದು ಕೊಡುತ್ತದೆ. ವಿರೋಧಿಗಳಿಗೆ ಸೋಲು ಖಂಡಿತ. ಆರೋಗ್ಯದ ಕಡೆ ಗಮನ ಹರಿಸಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷ ಣಗಳನ್ನು ಕಾಣುವಿರಿ.

ಮಕರ (Makara)


ಹೊಸ ಯೋಜನೆಗಳ ಬಗ್ಗೆ ಚಿಂತನೆ. ಮಿತ್ರರ ಸಹಕಾರ ದೊರೆಯುವುದು. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯುವುದು. ಅಧಿಕ ತಿರುಗಾಟದಿಂದ ದೇಹಾಲಸ್ಯ ಉಂಟಾಗುವುದು. ಬಂಧುಮಿತ್ರರ ಆಗಮನದಿಂದ ಸಂತಸ.

ಕುಂಭರಾಶಿ (Kumbha)


ವದಂತಿ ಹರಡುವವರನ್ನು ಸಮೀಪ ಇಟ್ಟುಕೊಳ್ಳಬೇಡಿರಿ. ಒಂದು ಚಿಕ್ಕ ವದಂತಿಯು ನಿಮ್ಮ ತೇಜೋವಧೆಯನ್ನು ಮಾಡಲಿರುವುದು. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರಿ. ಸಂಜೆಯ ವೇಳೆಗೆ ಆ ವದಂತಿಯು ಸುಳ್ಳೆಂದು ಗೋಚರಿಸುವುದು.

ಮೀನರಾಶಿ (Meena)


ನಿಮ್ಮ ಹಿತಚಿಂತಕರನ್ನು ಅಥವಾ ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದರಿಂದ ನಿಮ್ಮ ಮನಸ್ಸಿನ ತಾಕಲಾಟಕ್ಕೆ ಉತ್ತರ ದೊರೆಯುವುದು. ಮತ್ತು ಹಣಕಾಸಿನ ನೆರವು ದೊರೆಯುವುದು. ಆರೋಗ್ಯ ಉತ್ತಮವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top