fbpx
ಸಮಾಚಾರ

450 ಅಡಿ ಎತ್ತರದ ಬೃಹತ್ ಅಂಬೇಡ್ಕರ್​ ಪ್ರತಿಮೆ ನಿರ್ಮಾಣ: ಠಾಕ್ರೆ ಸರ್ಕಾರ ಅನುಮೋದನೆ

ವಾಣಿಜ್ಯ ನಗರಿ ಮುಂಬೈನ ಹಿಂದೂ ಮಿಲ್ಸ್‌ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಯನ್ನು ಈಗಿರುವ ಎತ್ತರಕ್ಕಿಂತ 100 ಅಡಿಗಳವರೆಗೆ ಎತ್ತರಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತಿಮೆಯ ತಳದಲ್ಲಿ ರಂಗಮಂಟಪ, ಗ್ರಂಥಾಲಯ ಹಾಗೂ ಸಂಶೋಧನ ಕೇಂದ್ರಗಳು ಮೂಡಿಬರಲಿವೆ. ಮುಂಬಯಿ ಮೆಟ್ರೋಪಾಲಿಟನ್‌ ಪ್ರಾಂತೀಯ ಅಭಿವೃದ್ಧಿ ಆಯೋಗ ಯೋಜನೆ ಅನುಷ್ಠಾನಗೊಳಿಸಲಿದೆ. ಇದು ಅಂಬೇಡ್ಕರ್​ ಅವರ ಪುಣ್ಯಸ್ಥಳ ಚೈತ್ಯಭೂಮಿ ಬಳಿಯಲ್ಲಿ ನಿರ್ಮಾಣವಾಗಲಿದೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು, ಉದ್ದೇಶಿತ ಕಂಚಿನ ಪ್ರತಿಮೆಯ ಎತ್ತರವನ್ನು 350 ಅಡಿಗೆ ಹೆಚ್ಚಿಸಲಾಗುವುದು ಮತ್ತು ಆಧಾರಪೀಠದ ಸಹಿತ ಅಂಬೇಡ್ಕರ್ ಸ್ಮಾರಕದ ಒಟ್ಟು ಎತ್ತರ 450 ಅಡಿಗಳಷ್ಟಾಗಲಿದೆ. ಪ್ರತಿಮೆ ನಿರ್ಮಾಣ ಕಾರ್ಯವನ್ನು ಇನ್ನು ಎರಡು ವರ್ಷದಲ್ಲಿ 2020ರೊಳಗೆ ಪೂರ್ಣಗೊಳಿಸಲಾಗುವುದು. ಹಿಂದಿನ ಸರ್ಕಾರ ಏನು ಮಾಡಿತು, ಅಥವಾ ಮಾಡಲಿಲ್ಲ ಎಂಬ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ಹಿಂದಿನ ಸರ್ಕಾರ ಅಂಬೇಡ್ಕರ್​ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಕೇವಲ ಭೂಮಿ ಪೂಜೆ ಮಾಡಿದ್ದರು” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top