fbpx
ಸಮಾಚಾರ

ಸೌತ್ ನಟ ನಿತಿನ್ ಗೆ ಕಂಕಣ ಭಾಗ್ಯ: ಬಹುಕಾಲದ ಗೆಳತಿಯೊಂದಿಗೆ ಮದುವೆ!

ಟಾಲಿವುಡ್ ಖ್ಯಾತ ನಟ ನಿತಿನ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ, ನಿತಿನ್ ಸದ್ಯದಲ್ಲೇ ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ನಿತಿನ್ ಅವರು ಏಪ್ರಿಲ್ 16ರಂದು ದುಬೈನಲ್ಲಿ ಮದುವೆ ಆಗಲಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೂ ಒಂದು ದಿನದ ಮುಂಚೆ ಅಂದರೆ ಏಪ್ರಿಲ್ 15ರಂದು ಪ್ರೀ ವೆಡ್ಡಿಂಗ್ ಸಮಾರಂಭ ಕೂಡ ಆಯೋಜಿಸಲಾಗಿದೆ ಎಂದು ವರದಿಯಾಗಿದೆ.

ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಜೊತೆ ಮದುವೆಯಾಗಲಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಕುಟುಂಬದಲ್ಲಿ ತಿಳಿಸಿ, ಹಿರಿಯರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆ ಮಾತ್ರವಲ್ಲ ಸಂಗೀತ ಕಾರ್ಯಕ್ರಮ ಕೂಡ ದುಬೈನಲ್ಲಿಯೇ ನಡೆಯಲಿದ್ದು, ವಿವಾಹದ ಕೆಲ ದಿನಗಳ ಬಳಿಕ ಹೈದರಾಬಾದ್‍ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಈಗಾಗಲೇ ನಿತಿನ್ ಹಾಗೂ ಶಾಲಿನಿ ಕುಟುಂಬದವರು ಮದುವೆ ತಯಾರಿಯಲ್ಲಿ ತಲ್ಲೀನರಾಗಿದ್ದು, ಮದುವೆಗೆ ದುಬೈನಲ್ಲಿ ಹೋಟೆಲ್ ಕೂಡ ಬುಕ್ ಮಾಡಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top