ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್ ಮಾಡಿದ್ದ ಬೀಫ್ ಖಾದ್ಯದ ಫೋಟೋವನ್ನು ರೀ ಟ್ವೀಟ್ ಮಾಡಿದ ಸಚಿವ ಸಿ ಟಿ ರವಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆ ಬೀಫ್ ಖಾದ್ಯದ ಫೋಟೋವನ್ನು ಟ್ವೀಟ್ ಮಾಡಿತ್ತು. ಖಾದ್ಯ ತಯಾರು ಮಾಡುವುದು ಹೇಗೆ? ಎಂಬ ಲಿಂಕ್ ಸಹ ನೀಡಿತ್ತು. ಈ ಟ್ವೀಟ್ ಅನ್ನು ಸಚಿವ ಸಿಟಿ ರವಿ ರೀಟ್ವೀಟ್ ಮಾಡಿ ನೆಟ್ಟಿಗರ ಕೋಪಕ್ಕೆ ಕಾರಣರಾಗಿದ್ದಾರೆ!
Welcome to Karnataka 💐.#KarnatakaTourism#OneStateManyWorlds https://t.co/27jZ1bPdmR
— C T Ravi 🇮🇳 ಸಿ ಟಿ ರವಿ (@CTRavi_BJP) January 16, 2020
“ಪರಿಮಳಯುಕ್ತ ಸಾಂಬಾರ ಪದಾರ್ಥಗಳು, ತೆಂಗಿನಕಾಯಿ ತುಂಡುಗಳು ಹಾಗೂ ಕರಿಬೇವಿನ ಸೊಪ್ಪಿನ ಜತೆ ಸಣ್ಣ ಉರಿಯಲ್ಲಿ ರೋಸ್ಟ್ ಮಾಡಲ್ಪಟ್ಟ ಬೀಫ್ ನ ಸಣ್ಣ ಮೆದುವಾದ ತುಂಡುಗಳು. ಬೀಫ್ ಉಲತಿಯತ್, ಅತ್ಯಂತ ಕ್ಲಾಸಿಕ್ ಖಾದ್ಯದ ರೆಸಿಪಿ” ಎಂದು ಕೇರಳಟೂರಿಸಂ ಟ್ವೀಟ್ ನಲ್ಲಿ ಬರೆಯಲಾಗಿತ್ತು ಹಾಗೂ ಕೊನೆಗೆ ಆ ರೆಸಿಪಿಯಿರುವ ವೆಬ್ ಸೈಟ್ ಲಿಂಕ್ ನೀಡಲಾಗಿತ್ತು. ಈ ಟ್ವೀಟನ್ನು ಸಿ.ಟಿ. ರವಿಯವರು ರಿಟ್ವೀಟ್ ಮಾಡಿ, ‘ಕರ್ನಾಟಕಕ್ಕೆ ಸುಸ್ವಾಗತ’ ಎಂದು ಬರೆದಿದ್ದರು.
ಹಿಂದೂ ಧರ್ಮ, ಗೋ ಮಾತೆ, ಗೋರಕ್ಷಕರು ಮುಂತಾದ ಪದಗಳನ್ನು ಬಳಸಿ ಸಿ. ಟಿ. ರವಿಯನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಟ್ಟಿಗರು ಆಕ್ರೋಶವನ್ನು ಹೊರಹಾಕುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಿ. ಟಿ. ರವಿ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
Come on Friends, how can You even think that I will support Beef. It is against my belief and faith.
I realized that many of You were hurt with the Kerala Tourism tweet. My tweet was a sarcastic and silent form of protest against it.
Hence, I welcomed You to visit Karnataka. https://t.co/PHdyo4Hr11
— C T Ravi 🇮🇳 ಸಿ ಟಿ ರವಿ (@CTRavi_BJP) January 16, 2020
ಇದಾಗ ಸುಮಾರು ಮೂರು ಗಂಟೆಯ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ ಟಿ ರವಿ “ ನಾನು ಬೀಫ್ ಅನ್ನು ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸಿದಿರಿ, ಇದು ನನ್ನ ನಂಬಿಕೆಗೆ ವಿರುದ್ಧವಾಗಿದೆ. ಕೇರಳದ ಪ್ರವಾಸೋದ್ಯಮದ ಟ್ವೀಟ್ನ್ನು ಹಂಚಿಕೊಂಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೀರಿ. ತನ್ನ ಟ್ವೀಟ್ ಕೇರಳದ ವಿರುದ್ಧ ವ್ಯಂಗ್ಯ ಹಾಗೂ ಮೌನ ಪ್ರತಿಭಟನೆಯಾಗಿದೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
