fbpx
ಸಮಾಚಾರ

ಐಟಿ ದಾಳಿ; ರಶ್ಮಿಕಾ ಮಂದಣ್ಣ ಬಳಿ ಒಟ್ಟು ಆಸ್ತಿ ವಿವರ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿರುವ ಕೊಡಗಿನ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ಸಮೀಪದ ಕುಕ್ಲೂರಿನ ನಿವಾಸದ ಮೇಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದು ತೆಲುಗು, ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ರಶ್ಮಿಕಾ ಮಂದಣ್ಣ ಮನೆಯಲ್ಲಿ ಐಟಿ ಅಧಿಕಾರಿಗಳ ದಾಖಲೆ ಪರಿಶೀಲನೆ ಇನ್ನೂ ಮುಂದುವರೆದಿದೆ. ಬೆಳಿಗ್ಗೆ ಏಳು ಗಂಟೆಯಿಂದ ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಮದನ್ ಮಂದಣ್ಣ ಅವರ ಕಿರಿಯ ಮಗಳನ್ನು ಮನೆಗೆ ಕರೆತರಲಾಗಿದೆ. ವೀರಾಜಪೇಟೆಯ ಖಾಸಗಿ ಶಾಲೆಯಲ್ಲಿ ರಶ್ಮಿಕಾ ಮಂದಣ್ಣ ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸೇರಿದ್ದು ಎನ್ನಲಾಗಿರುವ ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ವಿವರ ಪಡೆದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಂದೆ ಮದನ್ ಮಂದಣ್ಣರ ಹೆಸರಲ್ಲಿ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿರುವ ಎರಡು ಅಂತಸ್ತಿನ ಕೋಟಿ ಮೌಲ್ಯದ ಐಷರಾಮಿ ಬಂಗಲೆ, 2 ಐಷರಾಮಿ ಕಾರುಗಳು ಹಾಗೂ ವೀರಾಜಪೇಟೆ ಸಮೀಪದ ಮೈತಾಡಿ ಗ್ರಾಮದಲ್ಲಿ 24 ಎಕೆರೆ ಕಾಫಿ ತೋಟ ಇತ್ತೀಚೆಗೆ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಇದೆ ಎನ್ನಲಾಗುತ್ತಿದೆ.

ತೆರಿಗೆ ವಂಚನೆ ಆರೋಪ:
ರಶ್ಮಿಕಾ ಅವರು ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪ್ರಮಾಣದ ಸಂಭಾವನೆಯನ್ನು ನಗದು ರೂಪದಲ್ಲಿ ಪಡೆದುಕೊಂಡು ತೆರಿಗೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ದೊಡ್ಡಮೊತ್ತ ನೀಡಿ ಖರೀದಿಸಿದ್ದ 5 ಎಕರೆ ಜಾಗದಲ್ಲಿ ವಸತಿ ಶಾಲೆ ಹಾಗೂ ಪೆಟ್ರೋಲ್‌ ಬಂಕ್‌ ತೆರೆಯಲು ರಶ್ಮಿಕಾ ಸಿದ್ಧತೆ ನಡೆಸಿದ್ದರು. ಆ ಜಾಗವನ್ನು ಸಮತಟ್ಟು ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top