fbpx
ಸಮಾಚಾರ

ನಲಪಾಡ್‌ನನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲು ಬೆಂಬಲಿಸಿದರೇ ಸಿದ್ದರಾಮಯ್ಯ?

ಫರ್ಜಿ ಕೆಫೆಯಲ್ಲಿ ವಿದ್ವತ್ ಲೋಕನಾಥನ್ ಮೇಲೆ ನಡೆದ ಹಲ್ಲೆಯ ನಂತರ ಮೊಹಮದ್ ನಲಪಾಡ್ ಘನತೆಯನ್ನು ಮತ್ತೆ ತರಲು ಅವರ ತಂದೆ ಶಾಸಕ ಹ್ಯಾರಿಸ್ ತುಂಬಾ ಪ್ರಯತ್ನ ಪಡುತ್ತಿದ್ದಾರೆ. 2018ರಲ್ಲಿ ವಿದ್ವತ್ ಎಂಬಾತನಿಗೆ ಮನಸೋಯಿಚ್ಚೆ ಬಡಿದು ತನ್ನ ಪುಂಡುಗರ ಸಮೇತ ಜೈಲುಹಕ್ಕಿಯಾಗಿದ್ದ ನಲಪಾಡ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಎಂದಿನ ಜೀವನಕ್ಕೆ ಮರಳಿ ವರ್ಷಗಳು ಕಳೆದಿವೆ.

ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲೇ ಮುದ್ದೆ ಮುರಿದು ಆಚೆ ಬಂದಿದ್ದ ನಲಪಾಡ್ ಆ ನಂತರ ಹೆಚ್ಚಾಗಿ ಎಲ್ಲಿಯೂ ಹೊರಗೆ ಕಾಣಿಸಿಕೊಳ್ಳದೆ ಒಂದಷ್ಟು ದಿನ ಕಣ್ಮರೆಯಾಗಿದ್ದ ನಲಪಾಡ್ ಇತ್ತೀಚಿಗೆ ಮತ್ತೆ ಸಾರ್ವಜನಿಕವಾಗಿ ಹೆಚ್ಚೆಚ್ಚು ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೇ ಯೂತ್ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ನಲಪಾಡ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಜೈಲಿನಿಂದ ಹೊರ ಬಂದಿರುವ ನಲಪಾಡ್​ಗೆ ತಂದೆ ಹ್ಯಾರಿಸ್​ ಬೆಂಬಲವಾಗಿ ನಿಂತಿದ್ದು, ಆತನ ವರ್ಚಸ್ಸು ಮತ್ತೆ ತರಲು ಪ್ರಯತ್ನಿಸುತ್ತಿದ್ದಾರೆ. ಹೌದು ನಲಪಾಡ್ ತಂದೆ ಹ್ಯಾರಿಸ್ ಅವರು ತಮ್ಮ ಮಗನನ್ನ ಯುವ ಕಾಂಗ್ರೆಸ್ ಗೆ ಅಧ್ಯಕ್ಷನನ್ನಾಗಿ ಮಾಡಲು ಲಾಭಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಆಪ್ತ ವಲಯದಲ್ಲಿ ಕೇಳಿಬರುತ್ತಿವೆ. ಇದು ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಏಕೆಂದರೆ ವಿದ್ವತ್ ಪ್ರಕರಣದಿಂದಾಗಿ ನಲಪಾಡ್‍ನನ್ನು ಕಾಂಗ್ರೆಸ್ಸಿನಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೂ ನಲಪಾಡ್ ಅವರನ್ನ ಯೂತ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲು ಯತ್ನಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಬಳಿಕ ನಲಪಾಡ್ ನನ್ನು ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮತ್ತು ಪಕ್ಷದ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಕೆ. ಪರಮೇಶ್ವರ್ ಈ ಕುರಿತು ನಿರ್ಣಯ ತೆಗೆದುಕೊಂಡಿದ್ದರು. ಪಕ್ಷದಿಂದ ಉಚ್ಛಾಟನೆಗೊಂಡರೂ ನಲಪಾಡ್ ಅವರಿಗೆ ಪಟ್ಟ ಕಟ್ಟಿಸಲು ಹ್ಯಾರಿಸ್ ಅವರು ಪ್ರಯತ್ನಿಸುತ್ತಿರುವುದರ ಹಿಂದೆ ಯಾರ ಕೈವಾಡ ಇದೆ? ಪರಮೇಶ್ವರ್ ಅವರ ಮಾತನ್ನು ಕಡೆಗಣಿಸುವ ಕಾರಣದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹ್ಯಾರಿಸ್ ಅವರಿಗೆ ಬೆಂಬಲಿಸುತ್ತಿದ್ದಾರೆಯೇ? ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿ ಕಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top