fbpx
ಸಮಾಚಾರ

ಟೀಂ ಇಂಡಿಯಾಗೆ ಆಘಾತ :ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿಯಿಂದ ಪ್ರಮುಖ ಆಟಗಾರ ಔಟ್

ಕಳೆದ ವರ್ಷ ಕೂಡ ಸತತ ಗಾಯದ ಸಮಸ್ಯೆ ಎದುರಿಸಿ ಟೀಮ್‌ ಇಂಡಿಯಾದ ಸೇವೆಯಿಂದ ಬಹುಪಾಲು ದೂರಗುಳಿದಿದ್ದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ಗೆ ಇದೀಗ ಹೊಸ ವರ್ಷದಲ್ಲೂ ಅದೇ ದುರಾದೃಷ್ಟ ಕಾಡಲಾರಂಭಿಸಿದೆ.

ಟೀಮ್ ಇಂಡಿಯಾದ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ಹೊರ ಬಿದ್ದಿರುವ ಆಟಗಾರ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಶಿಖರ್ ಧವನ್ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೊಳಗಾಗಿದ್ದರು. ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಧವನ್ ಅವರನ್ನು ಟಿ20 ಸ್ಕ್ವಾಡ್‌ನಿಂದ ಕೈಬಿಡಲಾಗಿದೆ. ಇದೇ ಶುಕ್ರವಾರ ನಡೆಯಲಿರುವ ಕಿವೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಆಡುವ ತಂಡದಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಅವರ ಬದಲಿಗೆ ಯಾರಿಗೆ ಸ್ಥಾನ ನೀಡಲಾಗುವುದು ಎಂದು ಇನ್ನೂ ಪ್ರಕಟಿಸಿಲ್ಲ.

ಶಿಖರ್ ಧವನ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳುವ ತಂಡದಲ್ಲಿ ಯಾವುದೇ ಆಟಗಾರನನ್ನೂ ಹೆಸರಿಸಿಲ್ಲ. ಆದರೆ ಈಗಾಗಲೇ ಭಾರತ ‘ಎ’ ತಂಡ ನ್ಯೂಜಿಲ್ಯಾಂಡ್‌ನಲ್ಲಿ ಸರಣಿಯಲ್ಲಿ ಪಾಲ್ಗೊಂಡಿರುವ ಕಾರಣದಿಂದಾಗಿ ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್ ಅಥವಾ ಪೃಥ್ವಿ ಶಾ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top