fbpx
ಸಮಾಚಾರ

ಅನಾಥಾಶ್ರಮದಲ್ಲಿ ಅನಾಥ ಮಕ್ಕಳ ಜೊತೆ ನಟ ಚೇತನ್ ವಿಭಿನ್ನ ಪ್ರೀ-ವೆಡ್ಡಿಂಗ್ ಫೋಟೋಶೂಟ್

2007 ರಲ್ಲಿ ‘ಆ ದಿನಗಳು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಶಾಸ್ತ್ರೋಕ್ತವಾಗಿ ಮದುವೆಯಾಗಲು ಚೇತನ್ ಅವರು ಸಿದ್ಧತೆ ನಡೆಸುತ್ತಿದ್ದಾರೆ. ಅಸ್ಸಾಂ ಮೂಲದ ಯುವತಿಗೆ ಫ್ಲಾಟ್ ಆಗಿರುವ ಚೇತನ್ ಫೆಬ್ರವರಿಯಲ್ಲಿ ಸರಳವಾಗಿ, ಅನಾಥಾಶ್ರಮದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ.

ಫೆಬ್ರವರಿ 2ರಂದು ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರೋ ವಿನೋಭಾ ಭಾವೆ ಭವನದಲ್ಲಿ ವಿವಾಹ ನಡೆಯಲಿದೆ! ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್, ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ಮದುವೆ ಫೆಬ್ರವರಿ 2 ರಂದು ನಡೆಯುತ್ತಿದ್ದು, ಸಂಜೆ 6 ಗಂಟೆಗೆ ಇಬ್ಬರು ಹಸೆಮಣೆ ಏರಲಿದ್ದಾರೆ.

 

 

ಮದುವೆ ಸಂಭ್ರಮದಲ್ಲಿರುವ ಚೇತನ್ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್, ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವಿಭಿನ್ನವಾಗಿ ಮದುವೆ ಸಂಭ್ರಮ ಆಚರಿಸಿಕೊಳ್ಳಲಿರುವ ಚೇತನ್ ಈಗ ಪ್ರೀವೆಡ್ಡಿಂಗ್ ಫೋಟೋ ಕೂಡ ಟ್ರೆಂಡ್ ಆಗಿದೆ.

 

 

ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದಾರೆ. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಈಗ ಎಲ್ಲರ ಗಮನ ಸೆಳೆದಿದೆ.

 

 

ದುಬಾರಿಯಾದ, ಥರಹೇವಾರಿ ಕಾಸ್ಟ್ಯೂಮ್ಸ್‌ ಹಾಕಿಕೊಂಡು, 5 ಸ್ಟಾರ್ ಹೋಟೆಲ್ ಅಥವಾ ರೆಸಾರ್ಟ್‌ನಲ್ಲಿ ಕೈಕೈಹಿಡಿದಿಕೊಂಡು ಪೋಸ್ ಕೊಡೋದು ಕಾಮನ್. ಆದರೆ ಸರಳವಾಗಿ ಅನಾಥ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿಕೊಂಡಿರುವ ನಟ ಚೇತನ್ ಅವರ ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಮಾದರಿಯಾಗುವಂತದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top