fbpx
ಸಮಾಚಾರ

ಮದುವೆಯಾಗುವ ಹುಡುಗಿ ಬಗ್ಗೆ ಮಾಹಿತಿ ನೀಡಿದ ನಿಖಿಲ್​ ಕುಮಾರಸ್ವಾಮಿ!

ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಬಗ್ಗೆ ಗಾಸಿಪ್ ಹರಿದಾಡುತ್ತಿದೆ. ಈಗ ಸ್ವತಃ ನಿಖಿಲ್ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಬುಧವಾರ ನಿಖಿಲ್ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು “ಸದ್ಯದಲ್ಲೇ ಮದುವೆ ಬಗ್ಗೆ ಅನೌನ್ಸ್ ಮಾಡ್ತೇನೆ. ಹುಡುಗಿ ಯಾರೆಂದು ಹೇಳುತ್ತೇವೆ” ಎಂದು ಹೇಳಿದ್ದಾರೆ.

“ಬುಧವಾರ ನಿಖಿಲ್ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು ಅವರು, ನನ್ನ ಮದುವೆ ಬಗ್ಗೆ ಶೀಘ್ರದಲ್ಲೇ ಅನೌನ್ಸ್ ಮಾಡುತ್ತೇನೆ. ಅಲ್ಲಿಯವರೆಗೂ ಅತುರ ಬೇಡ. ನನ್ನ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಆ ಸುದ್ದಿಗಳೆಲ್ಲ ಸುಳ್ಳು. ಕಳೆದ ಒಂದು ವರ್ಷದಿಂದ ನಮ್ಮ ಮನೆಯಲ್ಲಿ ನನಗೆ ಹುಡುಗಿಯನ್ನು ಹುಡುಕುತ್ತಿದ್ದು, ಸದ್ಯದಲ್ಲೇ ಫೈನಲ್ ಆಗಲಿದೆ. ಆಕೆ ಯಾರು ಎನ್ನುವುದನ್ನು ಸ್ವತಃ ನಾನೇ ತಿಳಿಸುತ್ತೇನೆ” ಎಂದು ನಿಖಿಲ್ ಹೇಳಿದ್ದಾರೆ.

“ನಾನು ಮದುವೆ ಆಗುವ ಹುಡುಗಿ ಯಾರು ಅಂತ ಶೀಘ್ರದಲ್ಲಿ ಹೇಳುವೆ. ನಾನು ಮದುವೆ ಆಗುವ ಹುಡುಗಿ ಕನ್ನಡದ ಸರಳವಾದ ಹುಡುಗಿ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿದುಕೊಂಡಿರುವಂಥ ಹುಡುಗಿ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ಮದುವೆ ಆಗುವ ಹುಡುಗಿಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ. ಆಕೆ ತುಂಬಾ ಸಿಂಪಲ್. ಇನ್ನು ನನ್ನ ಮದುವೆ ಬಗ್ಗೆ ಅಪ್ಪ-ಅಮ್ಮ ಡಿಸೈಡ್ ಮಾಡುತ್ತಾರೆ. ಅಪ್ಪ-ಅಮ್ಮ ಏನು ಹೇಳ್ತಾರೋ, ಅದೇ ಫೈನಲ್” ಎಂದಿದ್ದಾರೆ ನಿಖಿಲ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top