fbpx
ಸಮಾಚಾರ

ನಟ ಶಿವರಾಜ್​ಕುಮಾರ್​ಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ; ಸಾಮಾಜಿಕ ಜಾಲತಾಣದಲ್ಲಿ ಆಂದೋಲನ

ಗಣರಾಜ್ಯೋತ್ಸವದ ದಿನ ಪ್ರತಿ ಬಾರಿಯಂತೆ ಈ ಬಾರಿಯೂ ಪದ್ಮ ಪ್ರಶಸ್ತಿಗಳು ಘೋಷಣೆ ಆಗಿದ್ದು ಈ ಪೈಕಿ ಬಾಲಿವುಡ್ ಚಿತ್ರರಂಗದ 4 ಗಣ್ಯರಿಗೆ ಪ್ರಶಸ್ತಿ ದೊರೆತಿದೆ. ನಟಿ ಕಂಗನಾ ರಣಾವತ್, ನಿರ್ಮಾಪಕಿ ಏಕ್ತ ಕಪೂರ್, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ಗಾಯಕ ಅದ್ನಾನ್ ಸಮಿ ಈ ನಾಲ್ವರ ಸಿನಿಮಾ ರಂಗದ ಸಾಧನೆಗಾಗಿ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ, ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಕಲಾ ವಿಭಾಗದಲ್ಲಿ ಬಾಲಿವುಡ್‌ ನಟಿ ಕಂಗನಾ ರನೋಟ್‌ಗೂ ಪದ್ಮಶ್ರೀ ಪ್ರಕಟಿಸಲಾಗಿದೆ. ಆಕೆ ಬಣ್ಣದಲೋಕ ಪ್ರವೇಶಿಸಿದ್ದು 2006ರಲ್ಲಿ ತೆರೆಕಂಡ ‘ಗ್ಯಾಂಗ್‌ಸ್ಟರ್‌’ ಚಿತ್ರದ ಮೂಲಕ. ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಇಲ್ಲಿಯವರೆಗೆ ಆಕೆ ನಟಿಸಿರುವ ಚಿತ್ರಗಳ ಸಂಖ್ಯೆ 34. ಕನ್ನಡದಲ್ಲಿ ಕಂಗನಾಗಿಂತಲೂ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟರಿದ್ದರೂ ಅವರಿಗೆ ಏಕೆ ಪದ್ಮಶ್ರೀ ಪ್ರಶಸ್ತಿ ನೀಡಿಲ್ಲ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

“ಕಂಗನಾ ಕೇವಲ 30 ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ನಮ್ಮ ಶಿವಣ್ಣ 120 ಚಿತ್ರಗಳಲ್ಲಿ ನಟಿಸಿದ್ದಾರೆ. ಕಂಗನಾಗಿಂತ ಹೆಚ್ಚು ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ,” ಎಂದಿದ್ದಾರೆ ಶಿವರಾಜ್​ಕುಮಾರ್​ ಅಭಿಮಾನಿಗಳು.“ಶಿವಣ್ಣನ ಮೊದಲ ಸಿನಿಮಾ 1986ರಲ್ಲಿ ಬಿಡುಗಡೆ ಆಗಿದೆ. ಕಂಗನಾ ರಣಾವತ್ ಹುಟ್ಟಿದ್ದೆ 1987 ರಲ್ಲಿ. ಕಂಗನಾ ಹಿಟ್ ಸಿನಿಮಾಗಳಿಗಿಂತ ಫ್ಲಾಪ್​ ಚಿತ್ರಗಳನ್ನೇ ನೀಡಿದ್ದು ಹೆಚ್ಚು. ಹೀಗಿರುವಾಗ, ಶಿವರಾಜಕುಮಾರ್ ಅವರಂಥ ಹಿರಿಯ ಕಲಾವಿದರು ಕಾಣಲಿಲ್ಲವೇ,” ಎಂದು ಶಿವಣ್ಣನ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

 

 

ಇನ್ನು ಡಾ ಶಿವರಾಜ್ ಕುಮಾರ್ ಯುವ ಸೇನೆ ಫೇಸ್ ಬುಕ್ ಪೇಜ್ ಮೂಲಕ ಶಿವಣ್ಣನಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ್ದು ಈ ರೀತಿಯಾಗಿ ಬರೆದುಕೊಂಡಿದೆ.

“ಕಂಗನಾ ರಾವತ್ ಗೆ ಪದ್ಮಶ್ರೀ ಗೌರವ.. ಇರಲಿ ನಮ್ಮ ದೇಶದ ನಟಿಗೆ ಸಿಕ್ಕಿರುವ ಪ್ರಶಸ್ತಿಗೆ ಕಂಗನಾ ರಾವತ್ ಅವರಿಗೆ ಗೌರಿವಿಸೋಣ. ಕಂಗನಾ ರಾವತ್ ಅವರು ಹುಟ್ಟಿದ್ದು 23-3-1987 ಅಂದರೆ ಈಗ ಕಂಗನಾ ಅವರಿಗೆ 32 ವರ್ಷ. ಅದೇ ನಮ್ಮ ಶಿವಣ್ಣ ಚಿತ್ರರಂಗ ಪ್ರವೇಶಿಸಿದ್ದು 1986. ಶಿವಣ್ಣನಿಗೆ ಈಗ 57 ವರ್ಷ . ಆದರೂ ಶಿವಣ್ಣನಿಗೆ ಇದುವರೆಗೂ ಯಾವುದೇ ರಾಷ್ಟ್ರ ಪ್ರಶಸ್ತಿ ದೊರೆತಿಲ್ಲ…”

” ಕನ್ನಡಿಗರು ಇಂತಹ ವಿಚಾರದಲ್ಲಿ ಪಕ್ಷಭೇದ ಮರೆಯಬೇಕು.. ಸಿನಿಮಾಗಳ ವಿಚಾರದಲ್ಲಿ ಬೇರೆ ಭಾಷೆಯ ನಟರು ಭಾರತ ರತ್ನ ಸೇರಿ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪ್ರತಿವರ್ಷ ಪಡೆಯುತ್ತಲೇ ಇದ್ದಾರೆ. ಆದರೆ ಕನ್ನಡ ಚಿತ್ರರಂಗ ಮಾತ್ರ ರಾಷ್ಟ್ರ ಪ್ರಶಸ್ತಿಗಳಿಂದ ವಂಚಿತವಾಗುತ್ತಲೇ ಇದೆ…. ನೆನಪಿಡಿ ಇದೆ ಶಿವರಾಜಕುಮಾರ್ ಮಾಡಿರುವ ಕಾದಂಬರಿ ಆಧಾರಿತ ಚಿತ್ರಗಳನ್ನು (ಜನುಮದ ಜೋಡಿ, ಹಗಲುವೇಷ, ಚಿಗುರಿದ ಕನಸು, ದೊರೆ, ಮನ ಮೆಚ್ಚಿದ ಹುಡುಗಿ, ಭೂಮಿ ತಾಯಿಯ ಚೊಚ್ಚಲ ಮಗ,ಮುಂತಾದವು ) ಇದುವರೆಗೂ ಯಾವ ನಟನೂ (ರಾಜಕುಮಾರ್ ಹೊರತುಪಡಿಸಿ ) ಮಾಡಿಲ್ಲ.. ಈ ವಿಷಯವಾಗಿ ಕನ್ನಡದ ಎಲ್ಲಾ ನಟರ ಅಭಿಮಾನಿಗಳು ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಿದೆ. ತಪ್ಪಿದ್ದರೆ ಕ್ಷಮಿಸಿ ಕನ್ನಡಿಗರೇ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top