fbpx
ಸಮಾಚಾರ

ಮುದ್ದು ಮಗಳ ನಾಮಕರಣ ಸಂಭ್ರಮದಲ್ಲಿ ನಟ ಚೇತನ್ ಚಂದ್ರ: ಹೆಸರೇನು ಗೊತ್ತಾ.?

‘ಪಿಯುಸಿ’, ‘ರಾಜಧಾನಿ’ ಹಾಗೂ ‘ಕುಂಭ ರಾಶಿ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತ ನಟ ಚೇತನ್ ಚಂದ್ರ ಚೇತನ್ ಚಂದ್ರ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಮಗಳು. ಹೌದು ಚೇತನ್ ಚಂದ್ರ ಅವರು ತಮ್ಮ ಮಗಳಿಗೆ ಸ್ಮಯಾ ಎಂದು ಅವರು ನಾಮಕರಣ ಮಾಡಿದ್ದಾರೆ. ಮಗಳ ನಾಮಕರಣದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

 

ಆಗಸ್ಟ್‌ 23, 2019ರಲ್ಲಿ ತಮ್ಮ ಕುಟುಂಬಕ್ಕೆ ಮಗಳು ಮಹಾರಾಣಿಯನ್ನು ಬರ ಮಾಡಿಕೊಂಡ ಚೇತನ್‌ ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. 5 ತಿಂಗಳ ಕಂದಮ್ಮನಿಗೆ ‘ಸ್ಮಯ’ ಎಂದು ಹೆಸರಿಟ್ಟಿದ್ದಾರೆ. ‘ನೇಮಿಂಗ್ ಸೆರ್ಮನಿ, ನಮ್ಮ ಮಗಳಿಗೆ ‘ಸ್ಮಯ’ ಎಂದು ಹಸರಿಟ್ಟಿದೀವಿ’ ಎಂದು ಬರೆದುಕೊಂಡು ಹಾಗೂ ಅಮೂಲ್ಯ ಕ್ಷಣದ ಪೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಶಿವಮೊಗ್ಗದ ಸಾಗರದಲ್ಲಿ ಚೇತನ್ ಚಂದ್ರ-ರಚನಾ ದಂಪತಿಯ ಪುತ್ರಿ ‘ಸ್ಮಯ’ ನಾಮಕರಣ ಸಮಾರಂಭ ನಡೆದಿದೆ. ಸ್ಮಯ ಹೆಸರಿನ ಅರ್ಥ ‘Smile’ಎಂದು. ಅಂದಹಾಗೆ ಚೇತನ್ ಚಂದ್ರ ಹಾಗೂ ರಚನಾ ಹೆಗಡೆ ಏಪ್ರಿಲ್‌ 17,2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top