fbpx
ಸಮಾಚಾರ

“ನನ್ನ ತಂದೆ ಪಾಕಿಸ್ತಾನದ ಸೈನಿಕ, ಹಾಗಂತ ಅವರ ಕೃತ್ಯಗಳಿಗೆ ನಾನು ಹೊಣೆಯೇ” ಪದ್ಮಶ್ರೀ ಪುರಸ್ಕೃತ ಅದ್ನಾನ್ ಸಮಿ

ಪಾಕಿಸ್ಥಾನ ಮೂಲದ ಗಾಯಕ ಅದ್ನಾನ್‌ ಸಾಮಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಕಟಿಸಿದ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿದೆ. ಸಾಮಿಗೆ ಪದ್ಮಶ್ರೀ ನೀಡಿದ್ದನ್ನು ವ್ಯಂಗ್ಯವಾಡಿದ ಕಾಂಗ್ರೆಸ್‌ ವಕ್ತಾರ ಜೈವೀರ್‌ ಶೆರ್ಗಿಲ್‌ಗೆ, ಸ್ವತಃ ಸಾಮಿ ಕಟುವಾದ ಉತ್ತರ ನೀಡಿದ್ದಾರೆ.

1965ರಲ್ಲಿ ನಡೆದ ಪಾಕ್​​ ಭಾರತ ನಡುವಿನ ಯುದ್ಧದಲ್ಲಿ ಅದ್ನಾನ್​ ಸಾಮಿ ಅವರ ತಂದೆ ಪಾಕಿಸ್ತಾನ ವಾಯುಪಡೆಯ ಪೈಲಟ್​ ಆಗಿ ಭಾರತದ ವಿರುದ್ಧ ಹೋರಾಡಿದ್ದರು. ಹೀಗಾಗಿ ಆ ವ್ಯಕ್ತಿಯ ಮಗನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಸರಿಯಲ್ಲ ಎಂದು ಕಾಂಗ್ರೆಸ್​, ಎನ್​ಸಿಪಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದಕ್ಕೆ ಸಂಬಂಧಪಟ್ಟಂತೆ ಸ್ವತಃ ಗಾಯಕ ಅದ್ನಾನ್​ ಸಾಮಿ ಅವರೇ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಶೆರ್ಗಿಲ್ ಅವರ ಟೀಕೆಯ ಕುರಿತು ಉತ್ತರಿಸಿರುವ ಸಂಗೀತಕಾರ ಅದ್ನಾನ್ ಸಾಮಿ, “ನನ್ನ ತಂದೆ ಪಾಕಿಸ್ತಾನದ ಗೌರವಾನ್ವಿತ ಸೈನಿಕರಾಗಿದ್ದರು. ಅವರು ತಮ್ಮ ದೇಶಕ್ಕಾಗಿ ದೇಶಭಕ್ತಿಯನ್ನು ಪ್ರದರ್ಶಿಸಿದರು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ದೇಶಕ್ಕೆ ನಿಷ್ಠಾವಂತ ಪ್ರಜೆಯಾಗಿರುವುದು ಹೇಗೆ ಎಂಬುದನ್ನು ನಾನು ಅವರಿಂದ ಕಲಿತಿದ್ದೇನೆ. ಆದರೆ, ನೀವು ತಂದೆಯ ಕೃತ್ಯಗಳಿಗೆ ಮಗನನ್ನು ಅಥವಾ ಮಗನ ಕೃತ್ಯಗಳಿಗೆ ತಂದೆಯನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಇಂದು ನಾನು ಹೆಮ್ಮೆಯ ಭಾರತೀಯನಾಗುತ್ತಿದ್ದೇನೆ. ನನ್ನ ದೇಶಪ್ರೇಮ ಮತ್ತು ನಿಷ್ಠೆ ನನ್ನ ಪ್ರೀತಿಯ ದೇಶದ ಕಡೆಗೆ ಇದೆ. ನಾನು ಸಂಗೀತಕಾರ ಎಂಬ ಅರ್ಹತೆಯ ಮೇರೆಗೆ ನನಗೆ ಈ ಪ್ರಶಸ್ತಿ ಲಭಿಸುತ್ತಿದೆ. ಹೀಗಾಗಿ ಈ ಪ್ರಶಸ್ತಿಗೂ ನನ್ನ ತಂದೆಯೊಂದಿಗಿನ ಸಂಬಧಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top