fbpx
ಸಮಾಚಾರ

ನಿರ್ದೇಶಕರ ವಿಡಿಯೋದಿಂದ ಸುದೀಪ್ ಫೋಟೋ ಕೈಬಿಟ್ಟಿದ್ಯಾಕೆ: ಆದಿತ್ಯ ಹೇಳಿದ್ದೇನು ಗೊತ್ತಾ?

ಆದಿತ್ಯ ಅಭಿನಯದ ‘ಮುಂದುವರಿದ ಅಧ್ಯಾಯ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಿನಿಮಾರಂಗದ ನಿರ್ದೇಶಕರ ವಿಡಿಯೋ ಪ್ರಸಾರ ಮಾಡಲಾಗಿದೆ. ಆಗಿನ ವೈವಿ ರಾವ್ ರಿಂದ ಹಿಡಿದು ಇಂದಿನ ಪ್ರಶಾಂತ್ ನೀಲ್, ಚೇತನ್ ವರೆಗೂ ನಿರ್ದೇಶಕರಿಗೆ ವಿಡಿಯೋ ಮೂಲಕ ತಂಡ ಧನ್ಯವಾದ ಹೇಳಿದೆ. ಆದ್ರೆ ಇಡೀ ವೀಟಿಯಲ್ಲಿ ನಿರ್ದೇಶಕನಾಗಿಯೂ ಖ್ಯಾತಿ ಗಳಿಸಿರುವ ನಟ ಕಿಚ್ಚನ ಸುಳಿವೇ ಇರಲಿಲ್ಲ.

ಕಾರ್ಯಕ್ರಮಕ್ಕೆ ಮುಖ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ದರ್ಶನ್ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋ ಕಾರಣಕ್ಕೆ ಸುದೀಪ್ ಅವ್ರನ್ನ ವಿಡಿಯೋದಿಂದ ಕೈಬಿಡಲಾಯ್ತಾ? ಎಂಬ ಪ್ರಶ್ನೆ ಮೂಡಿದೆ. ಇನ್ನು, ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡವೇ ಉದ್ದೇಶಪೂರ್ವಕವಾಗಿ ಸುದೀಪ್​ ಹೆಸರು ಕೈಬಿಟ್ಟಿರಬಹುದು ಎನ್ನುವ ಮಾತು ಕೇಳಿ ಬಂದಿದೆ.

ಇನ್ನು ಸುದೀಪ್ ಫೋಟೋ ಕೈ ಬಿಟ್ಟ ವಿಚಾರಕ್ಕೆ ನಟ ಆದಿತ್ಯ ಪ್ರತಿಕ್ರಿಯೆ ನೀಡಿದ್ದಾರೆ. ”ನೋ ಕಾಮೆಂಟ್ಸ್. ಎನಿಥಿಂಗ್ ಎಲ್ಸ್, ನಾನು ಕೂತುಕೊಂಡು ಆ ವಿಡಿಯೋ ಮಾಡಿಲ್ಲ. ನೀವು ನಂಬ್ತೀರೋ, ಬಿಡ್ತೀರೋ, ವಿಡಿಯೋ ಈಗಲೇ ಬಂದಿದ್ದು. ಬಹುಶಃ ಎಲ್ಲೋ ತಪ್ಪಾಗಿರಬಹುದು. ಅದು ನನ್ನ ಕಡೆಯಿಂದ ಅಂತೂ ಗ್ಯಾರೆಂಟಿ ಅಲ್ಲ. ಅದನ್ನ ನೀವು ಕೇಳಬೇಕಾಗಿರೋರನ್ನ ಕೇಳಬೇಕು. ವಿಡಿಯೋ ಮಾಡಿರುವವರನ್ನು ನೀವು ಕೇಳಬೇಕು. ನಾವಿಲ್ಲಿ ಸೀನಿಯರ್ ನಿರ್ದೇಶಕರಿಗೆ ಆದ್ಯತೆ ಕೊಟ್ಟಿದ್ವಿ” ಎಂದು ಮಾಧ್ಯಮಗಳ ಮುಂದೆ ನಟ ಆದಿತ್ಯ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top