fbpx
ಸಮಾಚಾರ

ಟ್ರೋಲಿಗರಿಗೆ ಧನ್ಯವಾದ ಹೇಳಿದ ಸಂಸದ ನಳಿನ್ ಕುಮಾರ್ ಕಟೀಲ್.

ಯಾವುದೇ ರೀತಿಯ ಖರ್ಚು ಮಾಡದೇ ಉಚಿತವಾಗಿ ಟ್ರೋಲ್ ಮೂಲಕ ಸುಲಭವಾಗಿ ನನ್ನನ್ನು ದೇಶ ವಿದೇಶದಾದ್ಯಂತ ಪ್ರಸಿದ್ಧಿಪಡಿಸಿದ ಎಲ್ಲಾ ಟ್ರೋಲ್ ಪೇಜ್ ಗಳಿಗೆ ಹಾಗೂ ಟ್ರೋಲ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುತ್ತೇನೆಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರು ಫ್ಲೈಓವರ್ ಉದ್ಘಾಟಿಸಿ ಮಾತನಾಡಿದ ಅವರು ಟ್ರೋಲ್ ಮಾಡಿದವರನ್ನು ಅಭಿನಂದಿಸಿದ್ದಾರೆ. “ನನ್ನನ್ನ ಟೀಕೆ ಮಾಡಿದವರೆಲ್ಲಾ ನನ್ನ ದೇವರು. ನನ್ನನ್ನು ಟ್ರೋಲ್ ಮಾಡಿದ ಎಲ್ಲರಿಗೂ ಅಭಿನಂದನೆ ‌ಸಲ್ಲಿಸುತ್ತೇನೆ. ಇವತ್ತು ನನ್ನನ್ನು ಇಡೀ ದೇಶದಲ್ಲಿ ಫೇಮಸ್‌ ಮಾಡಿದ್ದಾರೆ. ಈ ಕಾರಣಕ್ಕೆ ಅಂಥವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.

ನನ್ನನ್ನು ಚುಚ್ಚಿ ಕೆಲಸ ಮಾಡಲು ಸಾಥ್‌ ನೀಡಿದವರಿಗೆ ಧನ್ಯವಾದಗಳು. ವಿರೋಧ ಮಾಡುವ ಎಲ್ಲರೂ ಅಭಿಮಾನಿಗಳು. ಅವರು ವಿರೋಧ ಮಾಡಿದ ಕಾರಣಕ್ಕೆ ಈ ಕೆಲಸ ವೇಗವಾಗಿ ಆಗಿದೆ ಎಂದು ಅವರು ಹೇಳಿದ್ದಾರೆ. 10 ವರ್ಷಗಳಿಂದ ನಡೆಯುತ್ತಿದ್ದ ಪಂಪ್‌ವೆಲ್ ಫ್ಲೈ ಓವರ್ ಬಗ್ಗೆ ಮಂಗಳೂರಿನ ಟ್ರೋಲ್ ಪೇಜ್‌ಗಳು ಸಾಕಷ್ಟು ಟ್ರೋಲ್ ಮಾಡಿತ್ತು. ಈ ಹಿನ್ನಲೆಯಲ್ಲಿ ಕಟೀಲ್ ಅವರು ಈ ರೀತಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top