fbpx
ಸಮಾಚಾರ

ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಮೈಲುಗಲ್ಲು ಮುಟ್ಟಿದ್ದಾರೆ. ಹೌದು ಸುಂದರ ನೋಟ, ಉತ್ತಮ ನಿಲುವು, ಗಡುಸಾದ ಧ್ವನಿ ಹೀಗೆ ಒಬ್ಬ ಹೀರೋಗೆ ಯಾವೆಲ್ಲಾ ಕ್ವಾಲಿಟಿಗಳು ಬೇಕೋ ಅವೆಲ್ಲವನ್ನು ಹೊಂದಿರುವ ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾದ ಸುದೀಪ್ ಕನ್ನಡ ಚಿತ್ರೋದ್ಯಮದಲ್ಲಿ 24 ವರ್ಷಗಳನ್ನು ಮುಕ್ತಾಯಗೊಳಿಸಿದ್ದಾರೆ.

ತೊಂಭತ್ತಾರನೇ ಇಸವಿಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸುದೀಪ್ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅವಕಾಶಕ್ಕಾಗಿ ಅಲೆದಿದ್ದಾರೆ, ಅದನ್ನು ದಕ್ಕಿಸಿಕೊಳ್ಳಲು ತೀರಾ ಸಣ್ಣಪುಟ್ಟಪಾತ್ರಗಳನ್ನೂ ಮಾಡಿದ್ದಾರೆ. ಯಾಕೆಂದರೆ ಸಿನಿಮಾ ಎಂಬುದು ಸುದೀಪ್ ಬದುಕಿನ ಮಹಾ ಕನಸಾಗಿತ್ತು. ಒಬ್ಬ ನಟ ಅಭಿಮಮಾನದ ಪರಿಧಿಯಾಚೆಗೂ ಇಷ್ಟವಾಗುವಂಥಾ ಕೆಲ ಕ್ವಾಲಿಟಿಗಳಿವೆ. ಅಂಥವು ಕಿಚ್ಚಾ ಸುದೀಪ್ ವ್ಯಕ್ತಿತ್ವದಲ್ಲಿಯೂ ಧಾರಾಳವಾಗಿಯೇ ಇವೆ. ಹೀರೋ ಆಗಲೂ ಸೈ, ವಿಲನ್ ಆಗಲೂ ರೆಡಿ ಎಂಬ ಮನಸ್ಥಿತಿಯಿಂದಲೇ ಸುದೀಪ್ ಎಲ್ಲರ ಮನ ಗೆದ್ದಿದ್ದಾರೆ. ತೆಲುಗು, ಹಿಂದಿ, ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿಯೂ ಛಾಪು ಮೂಡಿಸಿದ್ದಾರೆ.

ತೆರೆ ಮೇಲೆ ಮಾತ್ರವಲ್ಲದೇ, ತೆರೆಯಾಚೆಗೂ ಹೀರೋ ಆಗಿಯೇ ಇರುವುದು ಸುದೀಪ್ ಸ್ಪೆಷಾಲಿಟಿ. ಬಲಗೈಲಿ ಕೊಟ್ಟಿದ್ದ ಎಡಗೈಗೆ ಗೊತ್ತಾಗಬಾರದು ಎಂಬಂತೆ ಸದಾ ಅಸಹಾಯಕರಿಗೆ ಸಹಾಯ ಮಾಡುತ್ತಾ, ಅಭಿಮಾನಿಗಳೀಗೂ ಮಾದರಿಯಾಗುತ್ತಾ ಮುಂದುವರೆಯುತ್ತಿರುವ ಸುದೀಪ್ ನಟನೆಯ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top