fbpx
ಸಮಾಚಾರ

ಹಿರಿಯ ನಟ-ಗಾಯಕ ಟಿ ಎಸ್ ರಾಘವೇಂದ್ರ ವಿಧಿವಶ!

ಹಿರಿಯ ನಟ ಹಾಗೂ ಗಾಯಕ ಟಿ ಎಸ್ ರಾಘವೇಂದ್ರ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಟಿ ಎಸ್ ರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಚೆನ್ನೈ ಕೆಕೆ ನಗರದಲ್ಲಿರುವ ಸ್ವಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತಿಮ ವಿಧಿ-ವಿಧಾನಗಳನ್ನ ನೆರವೇರಿಸಲಾಗಿದೆ!

ರಾಘವೇಂದ್ರ ಮೂಲ ಹೆಸರು ರಾಘವೇಂದರ್, ಹಿರಿಯ ಮಗಳು ಟಾಲಿವುಡ್‌ ಚಿತ್ರರಂಗದಲ್ಲಿ ಖ್ಯಾತ ಗಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಘವೇಂದ್ರ ಸಾವಿಗೆ ಜಾಲತಾಣದಲ್ಲಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಘವೇಂದ್ರ ಗಾಯಕನಾಗಿ ಮಾತ್ರವಲ್ಲದೆ ನಟನಾಗಿಯೂ ಮಿಂಚಿದ್ದಾರೆ. ವಿಕ್ರಮ್, ಜನನಾಯಗಂ, ಹರಿಚಂದ್ರ, ನೀ ವರುವಾಯ್ ಎನಾ ಅಂತಹ ಪ್ರಮುಖ ಸಿನಿಮಾಗಳಲ್ಲಿ ರಾಘವೇಂದ್ರ ಅಭಿನಯಿಸಿದ್ದಾರೆ. 2005ರಲ್ಲಿ ತೆರೆಕಂಡಿದ್ದ ‘ಪೊನ್ ಮೆಗಲೈ’ ಸಿನಿಮಾದಲ್ಲಿ ಕೊನೆಯ ಬಾರಿಗೆ ರಾಘವೇಂದ್ರ ಕಾಣಿಸಿಕೊಂಡಿದ್ದರು. ಇನ್ನು ಕೆಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಯಾಗ ಸಲೈ, ಉಯಿರ್ ಮತ್ತು ಪಾದಿಕಥ ಪಾಡಮ್ ಚಿತ್ರದ ಗೀತೆಗಳಿಗೆ ಸಂಗೀತ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top