fbpx
ಸಮಾಚಾರ

ಶಿವಣ್ಣ ಮತ್ತು ರಚಿತಾಗೆ ಸಂಭಾವನೆ ನೀಡಿಲ್ಲವಂತೆ ದ್ವಾರಕೀಶ್ ಪುತ್ರ!

ದ್ವಾರಕೀಶ್ ಅವರ ಪುತ್ರ ಯೋಗೇಶ್ ಮತ್ತು ನಿರ್ಮಾಪಕ ಜಯಣ್ಣ ಅವರ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ವಿವಾದ ಸುದ್ದಿಯಾದ ನಂತರ, ಸಾಕಷ್ಟು ವಿಷಯಗಳು ಹೊರ ಬರುತ್ತಿದ್ದು, ಜಯಣ್ಣ ಅವರು ಯೋಗೇಶ್ ದ್ವಾರಕೀಶ್ ಅವರ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡುತ್ತಾ, ಯೋಗೇಶ್ ಅವರು ಚಿತ್ರ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಕೂಡಾ ಸರಿಯಾಗಿ ಸಂಭಾವನೆಯನ್ನು ನೀಡಿಲ್ಲ ಎಂಬುದಾಗಿ ತಿಳಿಸಿದ್ದಾರೆ.

“ಆಯುಷ್ಮಾನ್ ಭವ’ ಸಿನಿಮಾದ ನಿರ್ಮಾಣ ಮಾಡಿದ್ದ ಯೋಗೇಶ್ ದ್ವಾರಕೀಶ್ ಆ ಸಿನಿಮಾದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಸರಿಯಾಗಿ ಸಂಭಾವನೆಯನ್ನು ಅದರಲ್ಲಿಯೂ ನಾಯಕ, ನಾಯಕಿಯಾಗಿರುವ ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ರಿಗೂ ಮಾತಿನಂತೆ ಪೂರ್ಣ ಪ್ರಮಾಣದ ಸಂಭಾವನೆ ಕೊಟ್ಟಿಲ್ಲ. ಬಿಡುಗಡೆಗೆ ಹತ್ತಿರವಿರುವಾಗಲೂ ನಟಿ ರಚಿತಾಗೆ ಅವರ ಸಂಭಾವನೆಯ 25% ಮಾತ್ರ ನೀಡಲಾಗಿತ್ತು. ಅವರು ಕೂಡಾ ಅದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು”

“ಇನ್ನು ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರಿಗೆ ಸಹ ಸರಿಯಾಗಿ ನೀಡಬೇಕಾದ ಹಣವನ್ನು ನೀಡಿಲ್ಲ ಎಂದು ಜಯಣ್ಣ ಆರೋಪ ಮಾಡಿದ್ದಾರೆ. ನೃತ್ಯ ನಿರ್ದೇಶನ ಮಾಡಿರುವ ಹರ್ಷ, ಸಾಹಸ ನಿರ್ದೇಶನ ಮಾಡಿದ ರವಿವರ್ಮರಿಗೆ ನೀಡಿದ ಚೆಕ್ ಬೋನ್ಸ್ ಆಗಿದೆಯಂತೆ. ರಂಗಾಯಣ ರಘುರಿಗೆ ಸಹ ಹಣ ಕೊಟ್ಟಿಲ್ಲ” ಎಂದು ಜಯಣ್ಣ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top