fbpx
ಸಮಾಚಾರ

ಕರ್ನಾಟಕ ಸರ್ಕಾರದಿಂದ ಪ್ರಪ್ರಥಮ ಬಾರಿಗೆ ಬ್ಲಾಕ್ ಚೈನ್ ತಂತ್ರಾಂಶವುಳ್ಳ ಆಶಾದೀಪ ಯೋಜನೆ ವೆಬ್ ಸೈಟ್ ಲೋಕಾರ್ಪಣೆ!

‘ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿಯ ಬ್ಲಾಕ್ ಚೈನ್ ತಂತ್ರಜ್ಞಾನ ಒಳಗೊಂಡ ವೆಬ್ ಸೈಟ್ ಅನ್ನು ಕರ್ನಾಟಕ ಸರ್ಕಾರವು ಲೋಕಾರ್ಪಣೆ ಮಾಡಿದೆ. ಇದು ಕರ್ನಾಟಕ ಸರ್ಕಾರದಿಂದ ಲೋಕಾರ್ಪಣೆಯಾಗುತ್ತಿರುವ ಮೊಟ್ಟ ಮೊದಲ ಬ್ಲಾಕ್ ಚೈನ್ ತಂತ್ರಾಂಶ ಒಳಗೊಂಡ ವೆಬ್ ಸೈಟ್ ಆಗಿದೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪನವರು ಈ ಯೋಜನೆಯ ವೆಬ್ ಸೈಟ್ ಗೆ ಚಾಲನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಸಮಾರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಶಿಕ್ಷಣ ಸಚಿವರಾದ ಸುರೇಶ ಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು ಉಪಸ್ಥಿತರಿದ್ದರು.

ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಆಶಾದೀಪ ಯೋಜನೆಯ ವೆಬ್ ಸೈಟ್ ಅನ್ನು ‘ಸುವರ್ಣ ನುಡಿ’ ಎಂಬ ಖಾಸಗಿ ಸಂಸ್ಥೆ ವಿನ್ಯಾಸ ಮಾಡಿದೆ. ಯೋಜನೆಯ ಕುರಿತ ವಿಚಾರಗಳನ್ನು ಆಕರ್ಷಕ ಮತ್ತು ವಿನೂತನವಾಗಿ ‘ಸುವರ್ಣಾನುಡಿ’ ಸಂಸ್ಥೆ ಪ್ರಸ್ತುತಪಡಿಸಿದೆ! ‘ಸುವರ್ಣ ನುಡಿ’ ಸಂಸ್ಥೆಯ ಕಾರ್ಯಕ್ಕೆ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top