fbpx
ಸಮಾಚಾರ

ರಾಸ್ ಟೇಲರ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು!

ಕ್ಲೀನ್‍ಸ್ವಿಪ್ ಮೂಲಕ ಟಿ20 ಸರಣಿ ಗೆದ್ದು ಬೀಗಿದ್ದ ಭಾರತ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿದೆ. ಬ್ಯಾಟ್ಸ್​ಮನ್​ಗಳು ಉತ್ತಮ ಆಟ ಆಡಿದರಾದರೂ, ಭಾರತೀಯ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಕೊಹ್ಲಿ ಪಡೆ ಸೋಲು ಕಂಡಿತು. ನ್ಯೂಜಿಲೆಂಡ್ ಅನುಭವಿ ಬ್ಯಾಟ್ಸ್​ಮನ್​ ರಾಸ್ ಟೇಲರ್ ಅವರ ಅಮೋಘ ಶತಕ, ನಾಯಕ ಟಾಮ್ ಲೇಥಮ್ ಹಾಗೂ ಹೆನ್ರಿ ನಿಕೂಲಸ್ ಸ್ಫೋಟಕ ಅರ್ಧಶತಕದ ನೆರವಿನಿಂದ ಕಿವೀಸ್ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದೆ.

ಹ್ಯಾಮಿಲ್ಟನ್‍ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಶ್ರೇಯಸ್ ಅಯ್ಯರ್​​ರ ಶತಕ, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಅರ್ಧಶತಕಗಳ ನೆರವಿನಿಂದ, ನಿಗಧಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 347 ರನ್​ಗಳಿಸಿತು. 348 ರನ್​ಗಳ ಸವಾಲನ್ನ ಬೆನ್ನಟ್ಟಿದ್ದ ನ್ಯೂಜಿಲೆಂಡ್ 11 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

ನ್ಯೂಜಿಲೆಂಡ್ ಪಾಲಿಗೆ ಇದು ಕ್ರಿಕೆಟ್ ಇತಿಹಾಸದ ಅತ್ಯಂತ ದೊಡ್ಡ ಗೆಲುವಾಗಿದ್ದು, ಅತ್ಯಂತ ದೊಡ್ಡ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಈ ಹಿಂದೆ 2007ರಲ್ಲಿ ಇದೇ ಹ್ಯಾಮಿಲ್ಟನ್ ಪಿಚ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 347 ರನ್ ಗಳ ಗುರಿಯನ್ನು ನ್ಯೂಜಿಲೆಂಡ್ ಸಾಧಿಸಿತ್ತು. ಇದು ಈ ವರೆಗಿನ ಗರಿಷ್ಠ ಸಾಧನೆಯಾಗಿತ್ತು. ಆದರೆ ಇಂದು 348ರನ್ ಗಳ ಗುರಿಯನ್ನು ಮೆಟ್ಟಿ ನಿಂತು ಈ ದಾಖಲೆಯನ್ನು ಹಿಂದಿಕ್ಕಿದೆ.

ಸಂಕ್ಷಿಪ್ತ ಸ್ಕೋರ್‌
ಭಾರತ: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 347
ಶ್ರೇಯಸ್‌ ಅಯ್ಯರ್‌ 103ರನ್‌
ಕೆ.ಎಲ್‌.ರಾಹುಲ್‌ 88 ರನ್‌
ವಿರಾಟ್ ಕೊಹ್ಲಿ 51 ರನ್‌

ಟಿಮ್‌ ಸೌಥಿ 85ಕ್ಕೆ 2 ವಿಕೆಟ್‌
ಕಾಲಿನ್‌ ಡಿ ಗ್ರಾಂಡ್‌ ಹೋಮ್‌ 71ಕ್ಕೆ 1 ವಿಕೆಟ್‌
ಈಶ್‌ ಸೋಧಿ 27ಕ್ಕೆ 1 ವಿಕೆಟ್‌

ನ್ಯೂಜಿಲೆಂಡ್‌: 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 348
ಹೆನ್ರಿ ನಿಕೋಲಸ್‌ 78 ರನ್‌
ಟಾಮ್‌ ಲಾಥನ್‌ 69 ರನ್‌
ರಾಸ್‌ ಟೇಲರ್ ಅಜೇಯ 107 ರನ್‌

ಕುಲದೀಪ್‌ ಯಾದವ್‌ 84ಕ್ಕೆ 2 ವಿಕೆಟ್‌
ಮೊಹಮದ್ ಶಮಿ 63ಕ್ಕೆ 1 ವಿಕೆಟ್‌
ಶಾರ್ದೂಲ್‌ ಠಾಕೂರ್‌ 80ಕ್ಕೆ 1 ವಿಕೆಟ್‌

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top