fbpx
ಸಮಾಚಾರ

ಭಾರತ ಟೆಸ್ಟ್‌ ತಂಡದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ಗಿಲ್ಲ ಸ್ಥಾನ: ಬಿಸಿಸಿಐ ವಿರುದ್ಧ ಅಭಿಮಾನಿಗಳ ಕಿಡಿ

ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಗೊಳಿಸಲಾಗಿದೆ. ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದಲೂ ಹೊಬಿದ್ದಿದ್ದಾರೆ. ಹೀಗಾಗಿ ಟೆಸ್ಟ್ ಸರಣಿಗೆ ರೋಹಿತ್ ಸ್ಥಾನಕ್ಕೆ ಬೇರೆ ಆಟಗಾರನನ್ನು ಹೆಸರಿಸಲಾಗಿದೆ. ಸೀಮಿತ ಓವರ್‌ಗಳಲ್ಲಿ ಅಬ್ಬಸುತ್ತಿರುವ ರಾಹುಲ್‌ಗೆ ನಿರಾಸೆಯಾಗಿದೆ. ರಾಹುಲ್ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ರೋಹಿತ್‌ ಶರ್ಮಾ ಗಾಯಗೊಂಡ ಹಿನ್ನೆಲೆಯಲ್ಲಿ ಅವರ ಬದಲಿಗೆ ರಾಹುಲ್‌ ಭಾರತ ಟೆಸ್ಟ್‌ ತಂಡದ ಪರ ಇನಿಂಗ್ಸ್‌ ಆರಂಭಿಸುವ ಅವಕಾಶ ಪಡೆಯುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮಂಗಳವಾರ ರಾಷ್ಟ್ರೀಯ ಆಯ್ಕೆ ಸಮಿತಿ ಭಾರತ ಟೆಸ್ಟ್‌ ತಂಡವನ್ನು ಪ್ರಕಟಿಸಿದ ಬಳಿಕ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. 27 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ರಾಹುಲ್‌ಗೆ ಕನಿಷ್ಠ ಹೆಚ್ಚುವರಿ ಓಪನರ್‌ ಆಗಿಯಾದರೂ ಅವಕಾಶ ನೀಡದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿರುವ ಕ್ರಿಕೆಟ್ ಅಭಿಮಾನಿಗಳು, ಕೆಎಲ್ ರಾಹುಲ್ ಕೈಬಿಟ್ಟ ವಿಚಾರವಾಗಿ ಪ್ರಶ್ನಿಸಿದಾರೆ. ಕಳೆದ ವರ್ಷ ಟೆಸ್ಟ್ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದರು ಕಳಪೆ ಪ್ರದರ್ಶನ ನೀಡಿದ್ದರು. ಆ ವೇಳೆ ರೋಹಿತ್ ಶರ್ಮಾ ಅವರಿಗೆ ಆರಂಭಿಕ ಸ್ಥಾನ ನೀಡಲಾಗಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಹುಲ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. 56 ಸರಾಸರಿಯಲ್ಲಿ 224 ರನ್ ಗಳನ್ನು ಸಿಡಿಸಿದ್ದರು. ಇದಕ್ಕೂ ಮುನ್ನ ನಡೆದ ಆಸೀಸ್ ವಿರುದ್ಧದ ಟೂರ್ನಿಯಲ್ಲೂ ರಾಹುಲ್ ಗಮನ ಸೆಳೆದಿದ್ದರು. ಆದ್ದರಿಂದ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿದಿರುವ ಅಭಿಮಾನಿಗಳು ಟೆಸ್ಟ್ ತಂಡದಲ್ಲಿ ರಾಹುಲ್‍ರನ್ನು ಕೈಬಿಡಲು ಪ್ರಬಲ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ.

ಅಂದಹಾಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೀಡಿದ್ದ ಕಳಪೆ ಪ್ರದರ್ಶನದಿಂದಾಗಿ ಕೆಎಲ್ ರಾಹುಲ್ ಅವರು ಸ್ಥಾನ ಕಳೆದುಕೊಂಡಿದ್ದರು. 2018ರ ಬಳಿಕ ಆಡಿದ 15 ಪಂದ್ಯಗಳಿಂದ 468 ರನ್‌ಗಳನ್ನು ಮಾತ್ರ ಗಳಿಸಲು ಶಕ್ತರಾಗಿದ್ದರು. ಹೀಗಾಗಿ 2019ರ ವೆಸ್ಟ್‌ ಇಂಡೀಸ್‌ ಪ್ರವಾಸದ ಬಳಿಕ ಟೆಸ್ಟ್‌ ತಂಡದಿಂದ ಹೊರಬಿದ್ದರು. ಆದರೀಗ ಉತ್ತಮ ಲಯದಲ್ಲಿರುವ ರಾಹುಲ್‌ಗೆ ಟೆಸ್ಟ್‌ನಲ್ಲಿ ಮತ್ತೊಂದು ಅವಕಾಶದ ಅಗತ್ಯವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top