fbpx
ಸಮಾಚಾರ

ಟೀಂ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ವಿರುದ್ಧ ಮುಸ್ಲಿಂ ಸಂಪ್ರದಾಯವಾದಿಗಳ ಆಕ್ರೋಶ!

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆಲುವಿನಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನ್ಯೂಜಿಲೆಂಡ್ ಕಡೆ ವಾಲಿದ್ದ 3ನೇ ಟಿ20 ಪಂದ್ಯಕ್ಕೆ ರೋಚಕ ತಿರುವು ನೀಡಿದ ಹೆಗ್ಗಳಿಕೆಗೆ ಶಮಿಗಿದೆ. ಭಾರತದ ಹಲವು ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಶಮಿ ಅಷ್ಟೇ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಮಗಳ ಫೋಟೋ ಶೇರ್ ಮಾಡಿ ಮುಸ್ಲಿಂಮರ ವಿರೋಧ ಕಟ್ಟಿಕೊಂಡಿದ್ದಾರೆ.

ಶಮಿ ತನ್ನ ಮುದ್ದಾದ ಮಗಳಿನ ಫೋಟೋ ಒಂದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಇದು, ಮುಸ್ಲಿಂ ಸಂಪ್ರದಾಯಿಗಳ ವಿರೋಧಕ್ಕೆ ಕಾರಣವಾಗಿದೆ. ಅದರಲ್ಲಿ ಪುಟ್ಟ ಬಾಲಕಿ ಹಳದಿ, ಕೆಂಪು ಮಿಶ್ರಿತ ಬಣ್ಣದ ಸೀರೆಯನ್ನುಟ್ಟು, ಹಣೆಗೆ ಕುಂಕುಮವನ್ನಿಟ್ಟು ಹಿಂದು ಸಂಪ್ರದಾಯದಲ್ಲಿ ಕಂಗೊಳಿಸುತ್ತಿದ್ದಾಳೆ. ಇದು ಸರಸ್ವತಿ ಪೂಜೆಯಲ್ಲಿ ತೆಗೆದ ಫೋಟೋ ಎನ್ನಲಾಗಿದೆ. ಬಾಲಕಿಯ ಹಿಂದೆ ಪೂಜಾ ಪೆಂಡಾಲ್​ ಇರುವುದನ್ನು ಗಮನಿಸಬಹುದು.

 

 

ಮೊಹಮ್ಮದ್​ ಶಮಿಯ ಅಭಿಮಾನಿಗಳು ಪೋಸ್ಟ್​ನ್ನು ಹೊಗಳಿದ್ದಾರೆ. ಶಮಿ ನಿಜವಾದ ಭಾರತೀಯ ಎಂದು ಕಾಮೆಂಟ್​ಗಳನ್ನು ಹಾಕಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಪೋಸ್ಟ್ ಎಷ್ಟು ಮೆಚ್ಚುಗೆಯನ್ನು ಪಡೆದಿದೆಯೋ ಅಷ್ಟೇ ವಿರೋಧ ಮುಸ್ಲಿಂ ಸಂಪ್ರದಾಯವಾದಿಗಳಿಂದ ಎದುರಾಗಿದೆ. ಶಮಿ ವಿರುದ್ಧ ಅಸಹ್ಯಕರ ಕಾಮೆಂಟ್​ ಗಳು ಬಂದು ಬೀಳುತ್ತಿವೆ. ನೀನೊಬ್ಬ ಮುಸ್ಲಿಂ ಅನ್ನೋದನ್ನು ಮರೆಯಬೇಡ ಎನ್ನುವ ಬೆದರಿಕೆಯೂ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top