fbpx
ಸಮಾಚಾರ

‘ಬಿಗ್ ಬಾಸ್ ಮುಗಿಸಿ ‘ಫ್ಯಾಂಟಮ್’ನತ್ತ ಮುಖ ಮಾಡಿದ ಕಿಚ್ಚ ಸುದೀಪ್

ಸೆಟ್ಟೇರುವ ಮುನ್ನವೇ ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ಪ್ಯಾಂಟಮ್ ಸಿಕ್ಕಾಪಟ್ಟೆ ಸದ್ದುಮಾಡುತ್ತಿದೆ,. ಹೌದು, ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಫ್ಯಾಂಟಮ್’ ಸಿನಿಮಾ ಮೇಲೆ ಸೆಟ್ಟೇರುವ ಮುನ್ನವೇ ನಿರೀಕ್ಷೆಗಳು ಮನೆ ಮಾಡುತ್ತಿದೆ.

ಕಿಚ್ಚ ಸುದೀಪ್ ಅವರು ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು ಬಿಗ್ ಬಾಸ್ ಸೀಸನ್ 7 ಕೂಡ ಮುಗಿದಿದೆ. ಆದರೆ ಕಿಚ್ಚ ಯಾವ ಕಾರಣಕ್ಕೂ ವಿರಾಮ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಮುಂದಿನ ವಾರ ಫ್ಯಾಂಟಮ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಅವರು ಸಜ್ಜಾಗುತ್ತಿದ್ದಾರೆ!

ಇನ್ನು ಫ್ಯಾಂಟಮ್ ಸಿನಿಮಾ ಸದ್ಯ ಚಿತ್ರೀಕರಣಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇನ್ನೇನು ಶೀಘ್ರದಲ್ಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಸದ್ದಿಲ್ಲದೆ ತಾರಾಗಣದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಸದ್ಯ ‘ಫ್ಯಾಂಟಮ್ ಚಿತ್ರದ ಸ್ಕ್ರಿಪ್ಟ್ ಕೆಲಸ ಬಹುತೇಕ ಕೊನೆಯ ಹಂತದಲ್ಲಿದೆ. ಸುದೀಪ್ ಫ್ಯಾಂಟಮ್‌ನಲ್ಲಿ ಯಾವ ಬಗೆಯ ಪಾತ್ರದಲ್ಲಿ ಯಾವ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕಾತುರತೆ ಪ್ರತಿಯೊಬ್ಬರಲ್ಲಿ ಮನೆಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top