fbpx
ಸಮಾಚಾರ

ಫೆಬ್ರವರಿ 08: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಶನಿವಾರ, ಫೆಬ್ರವರಿ 08 2019
ಸೂರ್ಯೋದಯ : 6:45 am
ಸೂರ್ಯಾಸ್ತ: 6:23pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾಘ
ಪಕ್ಷ : ಶುಕ್ಲಪಕ್ಷ
ತಿಥಿ : ಚತುರ್ದಶೀ 16:01
ನಕ್ಷತ್ರ: ಪುಷ್ಯ
ಯೋಗ: ಆಯುಷ್ಮಾನ್ 19:10
ಕರಣ: ವಾಣಿಜ 16:01 ವಿಷ್ಟಿ 26:34

ಅಭಿಜಿತ್ ಮುಹುರ್ತ: 12:10 pm – 12:56 pm
ಅಮೃತಕಾಲ : 4:11 pm – 5:40 pm

ರಾಹುಕಾಲ- 9:40 am – 11:07 am
ಯಮಗಂಡ ಕಾಲ- 2:00 pm – 3:26 pm
ಗುಳಿಕ ಕಾಲ- 6:48 am – 8:14 am

 

 

 

ಮೇಷ (Mesha)

 

ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷಮಿಸಿಬಿಡಿ.

 

ವೃಷಭ (Vrushabha)

ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಮಾಜದಲ್ಲಿ ಗೌರವ, ಸನ್ಮಾನಗಳು ಏರ್ಪಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮಿಥುನ (Mithuna)

ನಿಮ್ಮ ಬಂಧುಬಳಗದವರಿಂದ ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ.

 

ಕರ್ಕ (Karka)

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.

 

ಸಿಂಹ (Simha)

ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.

 

ಕನ್ಯಾರಾಶಿ (Kanya)

ಈದಿನದ ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವುದು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿರಿ. ದೈವಬಲದ ದೆಸೆಯಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.

 

ತುಲಾ (Tula)

ಧನಸಂಗ್ರಹದ ವಿಚಾರದಲ್ಲಿ ಸಂಗಾತಿಯಿಂದ ಸಕಾರಾತ್ಮಕ ಬೆಂಬಲ ಪ್ರೋತ್ಸಾಹ ದೊರೆಯುವುದು. ಮಹತ್ತರ ನಿರ್ಣಯಕ್ಕೆ ಶುಭ ದಿನವಾಗಿದೆ. ಬಂದ ಉತ್ತಮ ಅವಕಾಶವನ್ನು ಕಡೆಗಣಿಸಬೇಡಿ, ನೀವು ನಿಮ್ಮ ಮಾತಿನ ಚಾತುರ್ಯದ ಮೂಲಕ ಜನರ ಗಮನ ಸೆಳೆಯುವಿರಿ. ಇದರಿಂದ ನಿಮ್ಮ ಹಿಂಬಾಲಕರು ಹೆಚ್ಚಾಗುವರು

 

ವೃಶ್ಚಿಕ (Vrushchika)

ದೈವೀಕವಾದ ಉತ್ತಮ ಬೆಂಬಲವು ನಿಮಗೆ ಒದಗಿ ಬರುವುದು. ಹಮ್ಮಿಕೊಂಡ ಕಾರ್ಯಗಳು ಗುರು, ಹಿರಿಯರ ಆಶೀರ್ವಾದದಿಂದ ಪೂರ್ಣಗೊಳ್ಳುವುದು ಮತ್ತು ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು, ಅನವಶ್ಯಕವಾದ ಕಾರಣಗಳನ್ನು ಮುಂದಿಟ್ಟುಕೊಂಡು ವ್ಯಾಜ್ಯಕ್ಕೆ ಹೋಗುವಂತಹ ಮಂದಿ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿವೆ

 

ಧನು ರಾಶಿ (Dhanu)

ಸ್ವಾರ್ಥ ಇರುವುದು ತಪ್ಪೇನಲ್ಲ. ಆದರೆ ನಿಮ್ಮ ಸ್ವಾರ್ಥದಿಂದ ಅನ್ಯರಿಗೆ ತೊಂದರೆ ಆಗದಿರಲಿ. ಮನಸ್ಸಿನ ತುಮುಲಗಳನ್ನು ಹತೋಟಿಗೆ ತಂದುಕೊಳ್ಳಲು ಶಿವಪಂಚಾಕ್ಷ ರಿ ಮಂತ್ರವನ್ನು ಪಠಿಸಿ ಮತ್ತು ಮಾತಾ ದುರ್ಗಾದೇವಿಯ ದರ್ಶನ ಪಡೆಯಿರಿ.

 

ಮಕರ (Makara)

ನಿಮ್ಮ ಏಕಾಗ್ರತೆ ಹಾಗೂ ಕಠಿಣ ಪರಿಶ್ರಮಗಳಿಂದ ನಿಮ್ಮ ಮೇಲಿನ ಅಧಿಕಾರಿಗಳಿಗೆ ಹೆಚ್ಚಿನ ಸಂತೋಷ ಲಭ್ಯವಾಗಲಿದೆ. ಇದರಿಂದ ಅವರು ನಿಮಗೆ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಲು ನೇಮಿಸುವರು, ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ.

 

ಕುಂಭರಾಶಿ (Kumbha)

ವಿವಿಧ ಮೂಲಗಳಿಂದ ಹಣಕಾಸು ಬರುವುದು, ಬದಲಾವಣೆಯ ಮಾರ್ಗವನ್ನು ಬಯಸುವಿರಿ. ಕೆಲವು ಉತ್ತಮ ಗೆಳೆಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು, ನಿಮ್ಮ ಅಪರೂಪದ ಪ್ರತಿಭೆಯನ್ನು ಜನರು ಗುರುತಿಸುವ ಅದೃಷ್ಟದ ಕಾಲಘಟ್ಟವು ನಿಮ್ಮ ಪಾಲಿಗಿದೆ. ಹಾಗಾಗಿ ಮುನ್ನುಗ್ಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿ.

 

ಮೀನರಾಶಿ (Meena)

ಮನೋಕಾಮನೆಗಳು ಪೂರ್ಣಗೊಳ್ಳುವ ಸಮಯ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಉಂಟಾದರೆ ಕೆಲವರು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಅತಿ ಕಾರ್ಯಭಾರವು ಅನಾರೋಗ್ಯಕ್ಕೆ ಕಾರಣವಾಗುವುದು. ಅನಿರೀಕ್ಷಿತ ಪ್ರಯಾಣದಿಂದಾಗಿ ಕುಲದೇವತಾ ದರ್ಶನವಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top