fbpx
ಸಮಾಚಾರ

ನಟ ಚೇತನ್ ಮದುವೆ ಆದ ರೀತಿಗೆ ಮನಸೋತು ಹಾಡಿ ಹೊಗಳಿದ ರಾಜಕಾರಣಿ ಶಶಿ ತರೂರ್!

‘ಆ ದಿನಗಳು’ ಖ್ಯಾತಿಯ ನಟ ಚೇತನ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರಿಗು ಗೊತ್ತಿದೆ. ಸರಳ ಹಾಗೂ ವಿಶಿಷ್ಟವಾಗಿ ಮದುವೆಯಾಗಿ ಚೇತನ್-ಮೇಘ ಜೋಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಈ ಜೋಡಿಯ ವಿಶಿಷ್ಟ ಮದುವೆ ಬಗ್ಗೆ ತಿಳಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿ ನವ ಜೋಡಿಗೆ ಶುಭಕೋರಿ ಭೇಷ್ ಎಂದಿದ್ದಾರೆ.

 

 

ಚೇತನ್ ಮತ್ತು ಮೇಘ ಜೋಡಿಗೆ ಶುಭ ಕೋರಿದ ಶಶಿ ತರೂರ್, ”ಇದೊಂದು ಸಾಮಾಜಿಕ ಪ್ರಜ್ಞೆಯ ಮದುವೆ. ವಿವಾಹಕ್ಕೆ ಬಂದವರಿಗೆ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್ ಮತ್ತು ಮೇಘ ಕೊಟ್ಟಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಸರಳವಾಗಿ ಫೆಬ್ರವರಿ 1ರಂದು ರಿಜಿಸ್ಟರ್‌ ಮದುವೆ ಹಾಗೂ 2ರಂದು ವಿನೋಭ ಬಾವೆ ಆಶ್ರಮದಲ್ಲಿ ಆರತಕ್ಷತೆ ಮಾಡಿಕೊಂಡರು. ಪಾಲ್ಗೊಂಡ ಪ್ರತಿಯೊಬ್ಬ ಗಣ್ಯರಿಗೂ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್‌ ನೀಡಿದ್ದಾರೆ. ಈ ವಿಭಿನ್ನ ಮದುವೆಗೆ ಕಾಂಗ್ರೆಸ್ ನಾಯಕ ಶಶಿ ತರೂಣ್‌ ಮನಸೋತು ಟ್ಟಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top