fbpx
ಸಮಾಚಾರ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ನೇಮಕಾತಿ: 246 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುಬ್ಬಳ್ಳಿ ವಿದ್ಯುತ್ ಪೂರೈಕೆ ಸಂಸ್ಥೆ ನಿಯಮಿತಿ(ಹೆಸ್ಕಾಂ)ನಲ್ಲಿ ಪ್ರಸಕ್ತ ಸಾಲಿನ ಅಪ್ರೆಂಟಿಸ್ ನೇಮಕಾತಿಯನ್ನು ಮುಂದುವರೆಸಲಾಗಿದೆ. 246 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾಗಲು ಬಯಸುವವರು, ಫೆಬ್ರವರಿ 18ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ!

ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಗರಿಷ್ಠ 25 ವರ್ಷ ಮೀರಿರಬಾರದು (ಮೀಸಲಾತಿ ಅನ್ವಯ ಸಡಿಲಿಕೆ ಇದೆ).

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹50. ಇತರೆ ಅಭ್ಯರ್ಥಿಗಳಿಗೆ ₹100.

ವೇತನ:
₹10,926 ತಿಂಗಳಿಗೆ.

ನೇಮಕಾತಿ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಉದ್ಯೋಗ ಸ್ಥಳ:
ಹುಬ್ಬಳ್ಳಿ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top